Sunday, June 7, 2026
Homeಇತರಕುಂದಾಪುರ: ಲೋನ್ ಬಾಕಿ ಇದೆ ಎಂದು ಕರೆ ಬಂದರೆ ನಾನು ಸತ್ತು ಹೋಗಿದ್ದೇನೆ ಎಂದು ಹೇಳಿ...

ಕುಂದಾಪುರ: ಲೋನ್ ಬಾಕಿ ಇದೆ ಎಂದು ಕರೆ ಬಂದರೆ ನಾನು ಸತ್ತು ಹೋಗಿದ್ದೇನೆ ಎಂದು ಹೇಳಿ ಆತ್ಮಹತ್ಯೆಗೆ ಶರಣಾದ ಯುವಕ

- Advertisement -
- Advertisement -

ಕುಂದಾಪುರ: ಲೋನ್ ಬಾಕಿ ಇದೆ ಎಂದು ಕರೆ ಬಂದರೆ ನಾನು ಸತ್ತು ಹೋಗಿದ್ದೇನೆ ಎಂದು ಹೇಳಿ ಅಂತ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕುಂದಾಪುರದ ಹೆಮ್ಮಾಡಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದ ವಿಘ್ನೇಶ್ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಘ್ನೇಶ್, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಸ್ನೇಹಿತರ ಜೊತೆಗೆ ಸೇರಿ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್ ನಲ್ಲಿ ಸಾಲ ಮಾಡಿದ ವಿಘ್ನೇಶ್ ಸಾಲ ತೀರಿಸಲಾಗದೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರುವುದು ಡೆತ್ ನೋಟ್ ನಲ್ಲಿ ಬೆಳಕಿಗೆ ಬಂದಿದೆ.

ಡೆತ್ ನೋಟ್ ನಲ್ಲಿ ಎಟಿಎಂ ಪಾಸ್ವರ್ಡ್ ಬರೆದಿರುವ ಯುವಕ, ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ನಾನು ಸತ್ತು ಹೋಗಿದ್ದೇನೆ ಎಂದು ಹೇಳಿ ಎಂದು ಬರೆದಿದ್ದಾರೆ. ಸದ್ಯ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!