Thursday, June 25, 2026
Homeಇತರಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಕಂಬಳಗದ್ದೆಯಲ್ಲಿರುವ ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಕಂಬಳಗದ್ದೆಯಲ್ಲಿರುವ ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಇರುವ ಕಂಬಳಗದ್ದೆಯಲ್ಲಿರುವ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.30 ರ ಗುರುವಾರ ನಡೆದಿದೆ. ಮೃತರನ್ನು ಪುತ್ತೂರು ದರ್ಬೆ ನಿವಾಸಿ, ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು (50) ಎಂದು ಗುರುತಿಸಲಾಗಿದೆ.

ಚಪ್ಪಲಿ, ದ್ವಿಚಕ್ರ ವಾಹನ ಬಾವಿ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಪೊಲೀಸರು ಬಾವಿ ಪರಿಶೀಲನೆ ನಡೆಸಿದರು. ಪುತ್ತೂರು ಅಗ್ನಿಶಾಮಕದಳದ ರುಕ್ಮಯ ಗೌಡರವರ ನೇತೃತ್ವದಲ್ಲಿ ಕೃಷ್ಣ ಜಾಲಿಬೇರ, ತೌಸಿಪ್ ಯಾನೆ ಮುಲ್ಲಾ ಅವರು ಗರುಡಪಾತಾಳದ ಮೂಲಕ ಪತ್ತೆಮಾಡಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ಮನೋಹರ್ ಪ್ರಭು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!