Thursday, June 4, 2026
Homeಕರಾವಳಿಉಡುಪಿಕಾರ್ಕಳ : ಬೀದಿನಾಯಿಗಳ ದಾಳಿಗೆ ವೃದ್ಧ ಸಾವು!

ಕಾರ್ಕಳ : ಬೀದಿನಾಯಿಗಳ ದಾಳಿಗೆ ವೃದ್ಧ ಸಾವು!

- Advertisement -
- Advertisement -

ಕಾರ್ಕಳ: ವೃದ್ಧರೊಬ್ಬರು ಅಂಗಡಿ ಬದಿಯಲ್ಲಿ ಮಲಗಿದ್ದ ಸಮಯದಲ್ಲಿ ಬೀದಿ ನಾಯಿಗಳ ದಾಳಿಗೊಳಗಾಗಿ ಸಾವನ್ನಪ್ಪಿರುವ ಘಟನೆ ಕಾರ್ಕಳದ ಹಿರ್ಗಾನ ಎಂಬಲ್ಲಿ ನಡೆದಿದೆ.

ಮೃತರಾದವರನ್ನು ಹೆರ್ಮುಂಡೆಯ ಸಾಧು ಪೂಜಾರಿ(80) ಎಂದು ಹೇಳಲಾಗಿದೆ. 40 ವರ್ಷಗಳಿಂದ ಸಾಧು ಪೂಜಾರಿಯವರು ಮನೆಗೆ ಹೋಗದೇ ಕೂಲಿ ಕೆಲಸ ಮಾಡಿಕೊಂಡು ಹಿರ್ಗಾನ ಮೂಜೂರು ಪರಿಸರದ ಅಂಗಡಿ ಬದಿಯಲ್ಲಿ ರಾತ್ರಿ ಹೊತ್ತು ಮಲಗುತ್ತಿದ್ದರು ಎಂದು ಹೇಳಲಾಗಿದೆ. ಸೆಪ್ಟೆಂಬರ್ 21ರ ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ, ಹಿರ್ಗಾನ ಸ್ವಾಗತ್ ಕಾಂಪ್ಲೆಕ್ಸ್ ಕಟ್ಟಡದ ಎದುರು ಮಲಗಿದ್ದರು.ರಾತ್ರಿ ವೇಳೆಗೆ ಬೀದಿ ನಾಯಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದು, ಅವರನ್ನು ಕಚ್ಚಿ ಗಾಯಗೊಳಿಸಿವೆ. ಇದರಿಂದ ವಿಪರೀತ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!