Friday, June 5, 2026
Homeಕರಾವಳಿಮಂಗಳೂರಿನ ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ಯುವಕನ ಮೃತದೇಹ ಪತ್ತೆ!

ಮಂಗಳೂರಿನ ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ಯುವಕನ ಮೃತದೇಹ ಪತ್ತೆ!

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮಂಗಳೂರಿನ ಲಾಡ್ಜ್ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿಯಾಗಿರುವ ಗುರುಪ್ರಸಾದ್ ಮೃತ ದುರ್ದೈವಿ. ಬ್ಯುಸಿನೆಸ್ ಮ್ಯಾನ್ ಆಗಿರುವ ಇವರು ಸೆ.20 ರಿಂದ ಮಂಗಳೂರಿನ ಲಾಡ್ಜ್ ನಲ್ಲಿ ತಂಗಿದ್ದು,ಅ ಬಳಿಕ ರೂಮ್ ಲಾಕ್ ಮಾಡಿದ್ದರು.

ಗುರುವಾರದಂದು ಸಂಶಯದ ಮೇರೆಗೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತೃತ್ವದಲ್ಲಿ ಲಾಡ್ಜ್ ನ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದಾಗ ಗುರುಪ್ರಸಾದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗುರು ಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಅಸೌಖ್ಯದಿಂದ ಮೃತಪಟ್ಟಿದ್ದಾರಾ? ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಬೇಕಾಗಿದೆ.

- Advertisement -

Latest News

error: Content is protected !!