Monday, June 8, 2026
Homeಚಿಕ್ಕಮಗಳೂರುಬೇಕರಿಯಲ್ಲಿ ಸಂಗ್ರಹಣೆ ಮಾಡಲಾಗಿತ್ತು ಲೀಟರ್ ಗಟ್ಟಲೆ ಹೋಂ ಮೇಡ್ ವೈನ್; 16.50 ಲೀಟರ್ ವೈನ್...

ಬೇಕರಿಯಲ್ಲಿ ಸಂಗ್ರಹಣೆ ಮಾಡಲಾಗಿತ್ತು ಲೀಟರ್ ಗಟ್ಟಲೆ ಹೋಂ ಮೇಡ್ ವೈನ್; 16.50 ಲೀಟರ್ ವೈನ್ ವಶಪಡಿಸಿಕೊಂಡ ಅಬಕಾರಿ ಪೊಲೀಸರು

- Advertisement -
- Advertisement -

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಮರಿಯ ಬೇಕರಿಯಲ್ಲಿ ಸಂಗ್ರಹಣೆ ಮಾಡಿಡಲಾಗಿದ್ದ ಲೀಟರ್ ಗಟ್ಟಲೆ ಹೋಂ ಮೇಡ್ ವೈನ್ ಅನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. 

ಬೇಕರಿಯ ಮಾಲಿಕ ಲಿಯೊನಾರ್ಡೋ ಡಿಸೋಜ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಬೇಕರಿ ಮೇಲೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು 16.50 ಲೀಟರ್ ಹೋಂ ಮೇಡ್ ವೈನ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು ಆರೋಪಿ ಲಿಯೊನಾರ್ಡೋ ಡಿಸೋಜಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. 

ಈ ಘಟನೆಯ ಕುರಿತು ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಶೇಖರಣೆ ಮಾಡುವುದು ಕಂಡು ಬಂದಲ್ಲಿ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದ್ದಾರೆ. 

- Advertisement -

Latest News

error: Content is protected !!