Wednesday, June 3, 2026
Homeತಾಜಾ ಸುದ್ದಿವೇದಿಕೆಯಲ್ಲೇ ಶಾಸಕ ರಾಮದಾಸ್ ಅವರಿಗೆ ಗುದ್ದಿದ ಪ್ರಧಾನಿ ಮೋದಿ

ವೇದಿಕೆಯಲ್ಲೇ ಶಾಸಕ ರಾಮದಾಸ್ ಅವರಿಗೆ ಗುದ್ದಿದ ಪ್ರಧಾನಿ ಮೋದಿ

- Advertisement -
- Advertisement -

ಮೈಸೂರು: ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ತೆರಳಿದರು. ಅಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ವೇದಿಕೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರು ಅಲ್ಲಿಯೇ ಇದ್ದ ಶಾಸಕ ರಾಮದಾಸ್ ಅವರನ್ನು ಹತ್ತಿರ ಕರೆದು ಆತ್ಮೀಯವಾಗಿ ಬೆನ್ನಿಗೆ ಗುದ್ದಿ ಮಾತನಾಡಿಸಿದರು.

ಪ್ರಧಾನಿ ಕರೆದ ಕೂಡಲೇ ಸಮೀಪಕ್ಕೆ ಹೋದ ರಾಮದಾಸ್ ಅವರು ಕೈಮುಗಿದು ನಮಸ್ಕರಿಸಿ ಆತ್ಮೀಯತೆ ತೋರಿದ್ದು, ಮೋದಿ ಅವರು ಮೊದಲಿಗೆ ಗುದ್ದಿ ನಂತರ ಬೆನ್ನು ತಟ್ಟಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.

- Advertisement -

Latest News

error: Content is protected !!