Saturday, May 18, 2024
Homeಕರಾವಳಿಉಡುಪಿಉಡುಪಿ: ಅಗ್ನಿಪಥ್ ಹಿಂಸಾಚಾರ ಒಂದು ವ್ಯವಸ್ಥಿತ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಅಗ್ನಿಪಥ್ ಹಿಂಸಾಚಾರ ಒಂದು ವ್ಯವಸ್ಥಿತ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ

spot_img
- Advertisement -
- Advertisement -

ಉಡುಪಿ: ಅಗ್ನಿಪಥ್‌ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ಮಾಡ್ತಿರೋದನ್ನ ನೋಡ್ತಿದ್ರೆ ಇದೊಂದು ವ್ಯವಸ್ಥಿತ ಷಡ್ಯಂತ್ರ ಅನ್ನೋದು ತಿಳಿಯುತ್ತೆ ಅಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ರು. ಹಿಂದೆ ಕೃಷಿ ಮಸೂದೆ ವಿರುದ್ಧ ಹೋರಾಡಿದವರೇ ಈ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ರು.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಸಿ ರೈಲು ಸುಟ್ಟು ಹಾಕಿದವರು ಯಾರು ಕೂಡ ಸೈನ್ಯ ಸೇರುವವರಲ್ಲ. ಸೈನ್ಯ ಸೇರದವರು ಮತ್ತು ದೇಶಭಕ್ತಿ ಬಗ್ಗೆ ಮಾತನಾಡದವರು ಈ ಹಿಂಸಾಚಾರ ನಡೆಸುತ್ತಿದ್ದಾರೆ. ದೇಶದ ಸೈನ್ಯದ ವಿಚಾರದಲ್ಲಿ ಹಿಂದಿನಿಂದಲೂ ಸೈನಿಕರಿಗೆ ಕಲ್ಲು ಹೊಡೆಯುವುದು ಮತ್ತು ಸೈನಿಕರಿಗೆ ಕಲ್ಲು ಹೊಡೆದಾಗ ಎಲ್ಲ ಪಕ್ಷದವರು ಮೌನವಾಗಿರುವುದನ್ನು ನಾವು ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ನೋಡಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಹೈಸ್ಕೂಲ್ ಶಿಕ್ಷಣದಲ್ಲಿಯೇ ಸೈನ್ಯವನ್ನು ಒಂದು ಪಾಠವಾಗಿ ಕಲಿಸಲಾಗುತ್ತದೆ. ಆ ಮೂಲಕ ಅಲ್ಲಿನ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.

- Advertisement -
spot_img

Latest News

error: Content is protected !!