Saturday, June 6, 2026
Homeಕರಾವಳಿಉಡುಪಿಉಡುಪಿ: ನಮ್ಮದು ಕೆರಳಿದ ಸಿಂಹ:‌ ಕಾಂಗ್ರೆಸ್‌ನದ್ದು ಮಲಗಿದ ಸಿಂಹ: ಸಿಎಂ ವ್ಯಂಗ್ಯ

ಉಡುಪಿ: ನಮ್ಮದು ಕೆರಳಿದ ಸಿಂಹ:‌ ಕಾಂಗ್ರೆಸ್‌ನದ್ದು ಮಲಗಿದ ಸಿಂಹ: ಸಿಎಂ ವ್ಯಂಗ್ಯ

- Advertisement -
- Advertisement -

ಉಡುಪಿ: ರಾಷ್ಟ್ರ ಲಾಂಛನಕ್ಕೆ ಸಂಬಂಧಿಸಿದಂತೆ ಅಶೋಕನ ಸಾರನಾಥದಲ್ಲಿ ಇರುವಂತೆ ಯಥಾವತ್ತು ಮಾಡಲಾಗಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ ನಾವು ನೋಡುವ ದೃಷ್ಟಿ ಬೇರೆ, ಕಾಂಗ್ರೆಸ್ ಇದರಲ್ಲಿಯೂ ರಾಜಕೀಯ ಹುಡುಕುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ನ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತದೆ. ನಮ್ಮದು ಘರ್ಜಿಸುವ ಸಿಂಹ, ಅವರದ್ದು ನಿದ್ದೆ ಮಾಡುವ ಸಿಂಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಬಗ್ಗೆ ಚರ್ಚೆ ವಿರೋಧ ಸಂಬಂಧ  ಲಾಂಛನ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ಆ ಲಾಂಛನ ದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ವ್ಯಾಗ್ರವಾಗಿದೆ ಉಗ್ರವಾಗಿದೆ ಎಂಬುವುದು ನಮ್ಮ ದೃಷ್ಟಿಕೋನ ಸೂಚಿಸುತ್ತದೆ. ವಿರೋಧ ಪಕ್ಷ ಮೊಸರಲ್ಲಿ ಕಲ್ಲು ಹುಡುಕುತ್ತದೆ. ನಮ್ಮಲ್ಲಿ ಕ್ರಿಯಾಶೀಲವಾದ ಆಕ್ಟಿವ್ ಪ್ರಧಾನಿ ಇದ್ದಾರೆ ಎಂದರು.

- Advertisement -

Latest News

error: Content is protected !!