
ಬೆಂಗಳೂರು; ವಿಜಯ ರಾಘವೇಂದ್ರ- ಸ್ಪಂದನಾ ಅವರ ಜೋಡಿ ಪ್ರೇಮಿಗಳಿಗೆ ಆದರ್ಶದಂತಿದ್ದ ಜೋಡಿ. ಅದ್ಯಾರ ಕೆಟ್ಟು ಕಣ್ಣ ಬಿತ್ತೋ ಗೊತ್ತಿಲ್ಲ. ಕಳೆದ ವರ್ಷ ಆಗಸ್ಟ್ 6 ರಂದು ಸ್ಪಂದನಾ ಬ್ಯಾಂಕಾಕ್ ಗೆ ಸ್ನೇಹಿತೆಯರೊಂದಿಗೆ ತೆರಳಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಇಂದು ಸ್ಪಂದನಾ ಅವರ ಮೊದಲ ವರ್ಷದ ಪುಣ್ಯ ತಿಥಿ. ಈ ಹಿನ್ನೆಲೆ ಪತ್ನಿಯನ್ನು ನೆನೆದು ಪತಿ ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಚಿನ್ನ..ಮೌನದಲ್ಲಿ ಅರಳಿದ ನಗು ನಿನ್ನದು, ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು ಎಂದು ಬರೆದುಕೊಂಡಿದ್ದಾರೆ. ಇನ್ನು ಪುತ್ರ ಶೌರ್ಯ ಕೂಡ ಅಮ್ಮನನ್ನು ನೆನೆದು ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾನೆ. ಒಂದು ವರ್ಷದ ಹಿಂದೆ ನೀನು ನನ್ನ ಜೀವನದಿಂದ ದೂರವಾದೆ ಎಂದು ಬರೆದುಕೊಂಡಿದ್ದಾನೆ.ಇಬ್ಬರಿಗೂ ನಿಮ್ಮ ಜೊತೆ ನಾವಿದ್ದೇವೆ ಎಂದು ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.
ಇನ್ನು ಸ್ಪಂದನಾ ಮೊದಲ ವರ್ಷದ ಪುಣ್ಯ ತಿಥಿ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ತಂದೆ ಬಿ ಕೆ ಶಿವಾರಾಂ ಅವರ ಮನೆಯಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು.


