Thursday, June 25, 2026
Homeಕರಾವಳಿಉಡುಪಿಮಂಗಳೂರಿನ ಬಿಜೈಯಿಂದ ನಾಪತ್ತೆಯಾಗಿದ್ದ ಯುವತಿ ಕಾರ್ಕಳದ ಪ್ರಿಯಕರನ ಮನೆಯಲ್ಲಿ ಪತ್ತೆ

ಮಂಗಳೂರಿನ ಬಿಜೈಯಿಂದ ನಾಪತ್ತೆಯಾಗಿದ್ದ ಯುವತಿ ಕಾರ್ಕಳದ ಪ್ರಿಯಕರನ ಮನೆಯಲ್ಲಿ ಪತ್ತೆ

- Advertisement -
- Advertisement -

ಮಂಗಳೂರು; ಕಳೆದ ಜುಲೈ 30 ರಂದು ಮಂಗಳೂರಿನ ಬಿಜೈಯ ತನ್ನ ಮನೆಯಿಂದ
ನಾಪತ್ತೆಯಾಗಿದ್ದ ಯುವತಿ ಕ್ಯಾಲಿಸ್ತಾ ಫೆಬ್ರಾವೋ (18) ಕಾರ್ಕಳದ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿದ್ದಾಳೆ.

ಮನೆಯಿಂದ ಹೊರಟ ಕ್ಯಾಲಿಸ್ತಾ ನೇರವಾಗಿ ಪ್ರಿಯಕರನ ಮನೆಗೆ ಹೋಗಿದ್ದಳು ಎನ್ನಲಾಗಿದೆ. ಯುವತಿ ನಾಪತ್ತೆಯಾಗಿದ್ದಾಳೆ ಅನ್ನೋ ದೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆಗಿಳಿದ್ದಾರೆ. ಅದರಂತೆ ಆಕೆ ಬಳಸುತ್ತಿದ್ದ ಇನ್ಸ್ಟಾಗ್ರಾಂ ಅಕೌಂಟ್ ಹಾಗೂ Moj ಆ್ಯಪ್ ಗಳ ಅಕೌಂಟ್ ಪರಿಶೀಲಿಸಿದ್ದಾರೆ.ಆಗ ನಾಪತ್ತೆಗೆ ಕಾರಣ ಏನು ಅನ್ನೋದು ಗೊತ್ತಾಗಿದೆ.

ಕ್ಯಾಲಿಸ್ತಾ ಫೆಬ್ರಾವೋಳಿಗೆ ಕಾರ್ಕಳ ತಾಲೂಕಿ ಗಜೇಂದ್ರ ಬೈಲ್ ನಿವಾಸಿ ಸೂರಜ್ ಪೂಜಾರಿ (23) ಎಂಬಾತ ಇನ್ಸ್ಟಾಗ್ರಾಂನಲ್ಲಿ ಪರಿಚಿತನಾಗಿದ್ದ. ಬಳಿಕ ಅವರಿಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಮೊನ್ನೆ ಏಕಾಏಕಿ ನಾಪತ್ತೆಯಾದ ಆಕೆ ಸೀದಾ ಕಾರ್ಕಳದ ಸೂರಜ್ ಪೂಜಾರಿ ಮನೆಗೆ ಹೋಗಿದ್ದಾಳೆ.ಪೋಲಿಸರು ಸೂರಜ್ ಪೂಜಾರಿ ಮನೆಗೆ ಭೇಟಿ ನೀಡಿದಾಗ ನಾಪತ್ತೆಯಾಗಿದ್ದ ಹುಡುಗಿ ಆತನ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಇಬ್ಬರನ್ನೂ ಬರ್ಕೆ ಠಾಣೆಗೆ ಕರೆತಂದು ವಿಚಾರಿಸುವ ವೇಳೆ ಈ ಪ್ರೀತಿಯ ವಿಚಾರ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಕ್ಯಾಲಿಸ್ತಾ ಫೆಬ್ರಾವೋ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಿಲ್ಲದಿರುವುದು ಗಮನಕ್ಕೆ ಬಂದಿದ್ದು, ಹುಡುಗಿ ಸದ್ಯ ತಂದೆ ತಾಯಿಯ ಜೊತೆ ಹೋಗುವುದಿಲ್ಲ ಎಂದು ತಿಳಿಸಿರುವ ಕಾರಣ ಆಕೆಯನ್ನು ಸಾಂತ್ವಾನ ಕೇಂದ್ರ
ಕಳುಹಿಸಲಾಗಿದೆ.

- Advertisement -

Latest News

error: Content is protected !!