Thursday, June 25, 2026
Homeಕರಾವಳಿಯಕ್ಷಗಾನ ಹಾಸ್ಯ ಕಲಾವಿದ ವಿಶಾಲ್ ಜೈನ್ ವಾಮದಪದವು ನಿಧನ

ಯಕ್ಷಗಾನ ಹಾಸ್ಯ ಕಲಾವಿದ ವಿಶಾಲ್ ಜೈನ್ ವಾಮದಪದವು ನಿಧನ

- Advertisement -
- Advertisement -

ಪುಂಜಾಲಕಟ್ಟೆ: ಯಕ್ಷಗಾನ ಹಾಸ್ಯ ಕಲಾವಿದ, ವಿಶಾಲ್‌ ಜೈನ್‌ (ವಿ.ಕೆ.ಜೈನ್‌) ವಾಮದಪದವು (47) ಅವರು ಆ.5ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಿಶಾಲ್‌ ಜೈನ್‌ ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ, ಅಂತರಗುತ್ತು ನಿವಾಸಿ ಮುನಿರಾಜ ಚೌಟ ಅವರ ಪುತ್ರ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಅವರು ಬೆಂಕಿನಾಥೇಶ್ವರ ಮೇಳ, ಸಸಿಹಿತ್ಲು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬಪ್ಪನಾಡು ಮೇಳದ ಕಲಾವಿದ ರಾಗಿದ್ದು, ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

- Advertisement -

Latest News

error: Content is protected !!