Saturday, June 6, 2026
Homeಕರಾವಳಿಸೌಮ್ಯಾ ರಾಜೇಶ್ ಕೆ ಪೂಜಾರಿ ಕಿಲ್ಲೂರು ನೋಟರಿಯಾಗಿ ನೇಮಕ

ಸೌಮ್ಯಾ ರಾಜೇಶ್ ಕೆ ಪೂಜಾರಿ ಕಿಲ್ಲೂರು ನೋಟರಿಯಾಗಿ ನೇಮಕ

- Advertisement -
- Advertisement -

ಬೆಳ್ತಂಗಡಿ ; ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಪರ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ಅವರ ಜೊತೆ‌ ನ್ಯಾಯವಾದಿಯಾಗಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿರುವ ಸೌಮ್ಯಾ ರಾಜೇಶ್‌ ಕೆ ಪೂಜಾರಿ ಅವರನ್ನು‌ ದಕ್ಷಿಣ ಕನ್ನಡ ಜಿಲ್ಲಾ ನೋಟರಿ ವಕೀಲರಾಗಿ ಕೇಂದ್ರ ಸರ್ಕಾರ ನೇಮಕ‌ಮಾಡಿ ಆದೇಶ ಹೊರಡಿಸಿದೆ.

ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮ ಮಿತ್ತಕೋಡಿಯ ದಿ. ಓಬಯ್ಯ ಪೂಜಾರಿ ಮತ್ತು ರೇವತಿ ದಂಪತಿಯ ಪುತ್ರಿಯಾಗಿರುವ ಇವರು ಕಾನೂನು ಪದವಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದ್ದಾರೆ.  ಬೆಳ್ತಂಗಡಿ ತಾಲೂಕು ಕಿಲ್ಲೂರು ಕ್ರಷ್ಣಪ್ಪ ಪೂಜಾರಿಯ ಸೊಸೆಯಾಗಿರುತ್ತಾರೆ. ಪ್ರಸ್ತುತ ಇವರು ಪತಿ, ಪತ್ರಕರ್ತ ರಾಜೇಶ್.ಕೆ.ಪೂಜಾರಿ ಮತ್ತು ಮಗಳು ರಿಷಾ.ಆರ್ ಪೂಜಾರಿ ಜೊತೆ ಮಂಗಳೂರಿನಲ್ಲಿ ವಾಸವಿದ್ದಾರೆ.

- Advertisement -

Latest News

error: Content is protected !!