Thursday, June 4, 2026
Homeಕರಾವಳಿದಕ್ಷಿಣಕನ್ನಡಲ್ಲಿ ಇವತ್ತು 90 ಕೊರೊನಾ ಪಾಸಿಟಿವ್ ಪ್ರಕರಣಗಳು, ಉಡುಪಿಯಲ್ಲಿ 14 ಪ್ರಕರಣ, ಮಂಗಳೂರಿನಲ್ಲಿ ಇಬ್ಬರನ್ನು ಬಲಿ...

ದಕ್ಷಿಣಕನ್ನಡಲ್ಲಿ ಇವತ್ತು 90 ಕೊರೊನಾ ಪಾಸಿಟಿವ್ ಪ್ರಕರಣಗಳು, ಉಡುಪಿಯಲ್ಲಿ 14 ಪ್ರಕರಣ, ಮಂಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದ ಕೋವಿಡ್ -19

- Advertisement -
- Advertisement -

ಮಂಗಳೂರು :  ಮಂಗಳೂರಿನಲ್ಲಿ  ಪ್ರತಿದಿನ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸುತ್ತಾ  ವೇಗವಾಗಿ ಕೊರೊನಾ ಹರಡುತ್ತಿರೋದು ಸ್ಪಷ್ಟವಾಗುತ್ತಿದೆ. ನಿನ್ನೆ ಜಿಲ್ಲೆಯಲ್ಲಿ 84 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇವತ್ತು ಮತ್ತೆ 90 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ ಕೊರೊನಾ ಇವತ್ತು ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದಿದೆ.

ಇನ್ನು ಉಡುಪಿಯಲ್ಲಿ ಇವತ್ತು 14 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸದ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ 461 ಸಕ್ರೀಯ ಪ್ರಕರಣಗಳಿವೆ. ಇಂದು 34 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಉಡುಪಿಯಲ್ಲಿ 160 ಸಕ್ರೀಯ ಪ್ರಕರಣಗಳಿದ್ದು, 21 ಜನ ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!