Sunday, May 19, 2024
Homeಇತರಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ.. ಇಲ್ಲಿದೆ ಮಾಹಿತಿ

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ.. ಇಲ್ಲಿದೆ ಮಾಹಿತಿ

spot_img
- Advertisement -
- Advertisement -

ಮುಂಬಯಿ: ಕೋವಿಡ್ 19 ಸಂಕಷ್ಟ ಕಾಲದಲ್ಲೂ ನಮ್ಮ ದೇಶದಲ್ಲಿರುವ ಬ್ಯಾಂಕ್ ಗಳು ಸಕಲ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾ ತಮ್ಮ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿವೆ. ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲೂ ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪೂರ್ಣ ಸ್ಥಗಿತಗೊಂಡಿರಲಿಲ್ಲ.

ಈ ಬಾರಿ ಆಗಸ್ಟ್ ತಿಂಗಳಿನಲ್ಲಿ ಬಹುತೇಕ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳು ಬಂದಿರುವುದರಿಂದ ಈ ತಿಂಗಳಿನಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಗಸ್ಟ್ ತಿಂಗಳಿನಲ್ಲಿ 14 ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತವೆ (ರವಿವಾರ ಮತ್ತು ಎರಡನೇ ಶನಿವಾರವೂ ಸೇರಿದಂತೆ) . ಅಂದರೆ ತಿಂಗಳಿನ ಸರಿಸುಮಾರು ಅರ್ಧದಷ್ಟು ದಿನ ದೇಶದಲ್ಲಿ ಬ್ಯಾಂಕ್ ವ್ಯವಹಾರಗಳಿರುವುದಿಲ್ಲ.

ಈ ಕುರಿತಾದ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ್ದು ಇವುಗಳ ವಿವರ ಈ ಕೆಳಗಿನಂತಿದೆ.

ಆಗಸ್ಟ್ 01 – ಬಕ್ರಿದ್ (ಈದ್-ಉಲ್-ಫಿತ್ರ್)

ಆಗಸ್ಟ್ 02 – ರವಿವಾರ

ಆಗಸ್ಟ್ 03 – ರಕ್ಷಾ ಬಂಧನ

ಆಗಸ್ಟ್ 08 – ಎರಡನೇ ಶನಿವಾರ

ಆಗಸ್ಟ್ 09 – ರವಿವಾರ

ಆಗಸ್ಟ್ 11 – ಶ್ರೀ ಕೃಷ್ಣ ಜನ್ಮಾಷ್ಟಮಿ

ಆಗಸ್ಟ್ 13 – ಪೇಟ್ರಿಯಾಟ್ಸ್ ಡೇ

ಆಗಸ್ಟ್ 15 – ಸ್ವಾತಂತ್ರ್ಯ ದಿನ

ಆಗಸ್ಟ್ 16 – ರವಿವಾರ

ಆಗಸ್ಟ್ 20 – ಶ್ರೀಮಂತ ಶಂಕರದೇವ ತಿಥಿ

ಆಗಸ್ಟ್ 21 – ತೀಜ್ (ಹರಿತಾಲಿಕ)

ಆಗಸ್ಟ್ 22 – ಗಣೇಶ ಚತುರ್ಥಿ/ಸಂವತ್ಸರಿ ವಿನಾಯಕ ಚತುರ್ಥಿ

ಆಗಸ್ಟ್ 29 – ಕರ್ಮ ಪೂಜಾ/ಅಶೂರಾ

ಆಗಸ್ಟ್ 31 – ಇಂದ್ರಜಾತ್ರಾ/ತಿರು ಓಣಂ

- Advertisement -
spot_img

Latest News

error: Content is protected !!