Friday, June 5, 2026
Homeತಾಜಾ ಸುದ್ದಿತಹಶೀಲ್ದಾರ್ ಪತ್ನಿ ಆತ್ಮಹತ್ಯೆಗೆ ಶರಣು: ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

ತಹಶೀಲ್ದಾರ್ ಪತ್ನಿ ಆತ್ಮಹತ್ಯೆಗೆ ಶರಣು: ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

- Advertisement -
- Advertisement -

ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಂತ ಎಸ್.ಬಿ.ಕೂಡಲಗಿ ಅವರ ಪತ್ನಿ ಶಂಕ್ರಮ್ಮ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿರಗುಪ್ಪ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಂತ ಎಸ್.ಬಿ.ಕೂಡಲಗಿ ಅವರಿಗೆ, ಇತ್ತೀಚೆಗೆ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಳಿಸಲಾಗುತ್ತು. ಆದರೆ, ಸರ್ಕಾರಿ ನಿವಾಸವನ್ನು ಖಾಲಿ ಮಾಡಿರಲಿಲ್ಲ. ಅವರ ಪತ್ನಿ ಶಂಕ್ರಮ್ಮ(50) ಅವರು ಸರ್ಕಾರಿ ವಸತಿ ಗೃಹದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಹಸೀಲ್ದಾರ್​ರ ಪತ್ನಿ ಮೃತಪಟ್ಟ ಸ್ಥಳಕ್ಕೆ ಎಸಿ ಕೋನಾರಡ್ಡಿ, ಶಾಸಕ ಸೋಮಲಿಂಗಪ್ಪ ಭೇಟಿ ನೀಡಿದ್ದರು. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಲಿಂಗಪ್ಪ, ಹಲವು ವರ್ಷಗಳಿಂದ ಶಂಕ್ರಮ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನ ಹಲವು ಬಾರಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಶಂಕ್ರಮ್ಮ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಆಸ್ಪತ್ರೆಯ ದಾಖಲೆಗಳಿವೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ ಎಂದರು.

ಆ ಮೂಲಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತಹಸೀಲ್ದಾರ್​ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಾಸಕರು ಹೇಳಿರುವುದು ತಹಸೀಲ್ದಾರ್​ರ ಪತ್ನಿ ಅನುಮಾನಾಸ್ಪದ ಸಾವಿಗೆ ಮತ್ತಷ್ಟು ತಿರುವು ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

Latest News

error: Content is protected !!