Saturday, June 27, 2026
Homeತಾಜಾ ಸುದ್ದಿರಾಜಕೀಯ ನಾಯಕರು ಸದಾ ಹೀಗಿದ್ರೆ ಹೇಗಿರುತ್ತೆ ಅಲ್ವಾ: ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ...

ರಾಜಕೀಯ ನಾಯಕರು ಸದಾ ಹೀಗಿದ್ರೆ ಹೇಗಿರುತ್ತೆ ಅಲ್ವಾ: ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಈ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ…

- Advertisement -
- Advertisement -

ಬೆಂಗಳೂರು:  ಬೇರೆ ಬೇರೆ ಪಕ್ಷದ ರಾಜಕೀಯ ನಾಯಕರು ಅಂದ್ರೆ ಸದಾ ಆರೋಪ ಪ್ರತ್ಯಾರೋಪ ಮಾಡ್ತಾ ಒಬ್ರನ್ನು ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅನ್ನೋ ಥರಾ ಇರ್ತಾರೆ ಅನ್ನೋದು ನಮ್ಮ ನಿಮ್ಮ ಸಾಮಾನ್ಯ ಕಲ್ಪನೆ. ಆದ್ರೆ ರಾಜಕೀಯದ ಹೊರತಾಗಿ ಅವರೆಲ್ಲಾ ಎಷ್ಟು ಚೆನ್ನಾಗಿರ್ತಾರೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ..

ನಿನ್ನೆ ಸಿಎಂ ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ್ದರು. ಆದ್ರೆ ಸಂಜೆ ಇದೆಲ್ಲಾ ನಡೆದೇ ಇಲ್ಲ ಎಂಬಂತೆ ಆರಾಮಾಗಿದ್ರು. ನಿನ್ನೆ ಶಾಸಕ ಹರತಾಳ್ ಹಾಲಪ್ಪ  ಪುತ್ರಿ ವಿವಾಹ ಸಮಾರಂಭ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಿತು. ಅಲ್ಲಿ ಹಾಲಿ ಹಾಗೂ ಮಾಜಿ ಸಿಎಂ ಮುಖಾಮುಖಿಯಾದ್ರು. ಮದುವೆಗೆ ಭೇಟಿ ಕೊಟ್ಟು ಸಿದ್ದರಾಮಯ್ಯ ಹೊರ ಬರುತ್ತಿದ್ದಂತೆ ಸಿಎಂ ಆಗಮಿಸಿದ್ರು. ಈ ವೇಳೆ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಳಿ ಏನ್ ಸರ್ ನಮಗಿಂತ ಮುಂಚೆ ಹೆಂಗ್ ಬರ್ತಿರಾ ಸರ್ ನೀವು ಅಂತಾ ತಮಾಷೆಯಾಗಿ ಹೇಳಿದ್ರು. ಅದಕ್ಕೆ ಸಿದ್ದರಾಮಯ್ಯ ವಿರೋಧ ಪಕ್ಷದವರು ಯಾವಾಗಲೂ ಮುಂದಿರ ಬೇಕು ಎಂದು ಹೇಳಿ ಜೋರಾಗಿ ನಕ್ಕರು. ಬಳಿಕ ಸಿದ್ದರಾಮಯ್ಯ ಅವರ ಬೆನ್ನು ತಟ್ಟಿ ಕೈ ಕುಲುಕಿ ಮುಂದೆ ಸಾಗಿದ್ರು ಸಿಎಂ.

ಈ ವಿಡಿಯೋ ನೋಡಿದಾಗ ಒಂದು ಸಲ ಎಂತಹವರಿಗಾದ್ರೂ ಪ್ರತಿ ದಿನ ರಾಜಕೀಯ ನಾಯಕರು ಹೀಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಂತಾ ಅನ್ನಿಸದೇ ಇರಲ್ಲ. ಅಲ್ಲದೇ ಪಕ್ಷಗಳ ಹೆಸರಲ್ಲಿ ಬಡಿದಾಡಿಕೊಳ್ಳೋ ಜನ ಈ ವಿಡಿಯೋ ನೋಡಿದ್ರೆ ನಾವ್ಯಾಕೆ ಬಡಿದಾಡಬೇಕು ಅಂತಾ ಪ್ರಶ್ನೆ ಮೂಡೋದು ಸಹಜ.

- Advertisement -

Latest News

error: Content is protected !!