Wednesday, June 24, 2026
Homeತಾಜಾ ಸುದ್ದಿಜಾರಿದ ಮಾಜಿ ಸಿಎಂ ಪಂಚೆ!…. ಮುಜುಗರಕ್ಕೊಳಗಾದ ಸಿದ್ದರಾಮಯ್ಯ

ಜಾರಿದ ಮಾಜಿ ಸಿಎಂ ಪಂಚೆ!…. ಮುಜುಗರಕ್ಕೊಳಗಾದ ಸಿದ್ದರಾಮಯ್ಯ

- Advertisement -
- Advertisement -

ಬಸವಕಲ್ಯಾಣ : ಮಾಜಿ ಸಿಎಂ,ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿವಂಗತ ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈವೇಳೆ ವೇದಿಕೆಯಲ್ಲಿ ಮಾತನಾಡುವಾಗ ಅವರ ಪಂಚೆ ಜಾರಿದ್ದು ಮುಜುಗರ ಮೂಡಿಸಿತು.

ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ನಿಂತು ಮಾತನಾಡುವಾಗ ಪಂಜೆ ಸಡಿಲಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ಗಮನಿಸಿದ ನಗರ ಠಾಣೆ ಪಿಎಸ್ ಐ ಗುರುಪಾಟೀಲ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಮತ್ತು ಹಮನಾಬಾದ ಶಾಸಕ ರಾಜಶೇಖರ್ ಪಾಟೀಲ್ ಗೆ ತಿಳಿಸಿದ್ದರಿಂದ ರಾಜಶೇಖರ್ ಪಾಟೀಲ್ ಸಿದ್ದರಾಮಯ್ಯ ಬಳಿ ವಿಷಯವನ್ನು ತಿಳಿಸಿದರು.

ನಂತರ ಸಿದ್ದರಾಮಯ್ಯ ಪಂಚೆಯನ್ನು ಕಟ್ಟಿಕೊಂಡರು. ಈ ವೇಳೆ ಸಿದ್ದರಾಮಯ್ಯ ಪಂಜೆ ಕಟ್ಟಿಕೊಳ್ಳುತ್ತಲೇ ಹೊಟ್ಟೆಗೆ ಹಸಿವಾಗಿದೆ ಅಂತಾ ಕಾಣಿಸುತ್ತಿದೆ. ಅದಕ್ಕಾಗಿಯೇ ಲುಂಗಿ ಸಡಿಲಗೊಂಡಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

- Advertisement -

Latest News

error: Content is protected !!