Monday, October 12, 2026
Homeತಾಜಾ ಸುದ್ದಿಶಾರೂಖ್ ಆ ಬೆಡಗಿಗೆ ಕ್ಷಮೆ ಕೇಳಿದ್ದೇಕೆ? ಇಷ್ಟಕ್ಕೂ ಬಾಲಿವುಡ್ ಕಿಂಗ್ ಮಾಡಿದ ತಪ್ಪೇನು?

ಶಾರೂಖ್ ಆ ಬೆಡಗಿಗೆ ಕ್ಷಮೆ ಕೇಳಿದ್ದೇಕೆ? ಇಷ್ಟಕ್ಕೂ ಬಾಲಿವುಡ್ ಕಿಂಗ್ ಮಾಡಿದ ತಪ್ಪೇನು?

- Advertisement -
- Advertisement -

ಮುಂಬೈ: ‘ದಿಲ್ ಸೆ’ ಚಿತ್ರ 18 ವರ್ಷ ಪೂರೈಸಿದ ಸಂಭ್ರಮಾಚರಣೆ ವೇಳೆ ಶಾರೂಖ್ ತಪ್ಪನ್ನು ಮಾಡಿದ್ದು, ತಕ್ಷಣವೇ ಅದನ್ನು ಒಪ್ಪಿಕೊಂಡು ಕ್ಷೆಮೆ ಕೂಡ ಕೇಳಿದ್ದಾರೆ.ಮಣಿರತ್ನಂ ಅವರ ‘ದಿಲ್ ಸೆ’ ಸಿನಿಮಾ 18 ವರ್ಷ ಪೂರೈಸಿದ್ದಕ್ಕೆ ಶಾರೂಖ್ ಸಾಮಾಜಿಕ ತಾಣ ಇನ್ ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದರು. ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ ಕೂಡಾ ಹೇಳಿದ್ದರು.

‘ದಿಲ್ ಸೆ’ ತಮ್ಮ ಫೇವರಿಟ್ ಚಿತ್ರ ಎಂದಿದ್ದ ಶಾರುಖ್, ತಮಗೆ ಜೋಡಿಯಾಗಿದ್ದ ಮನೀಶಾ ಕೊಯಿರಾಲಾಗೂ ಧನ್ಯವಾದ ಅರ್ಪಿಸಿದ್ದರು. ಈವೇಳೆ ಪ್ರೀತಿ ಝಿಂಟಾ ಅವರನ್ನು ಮರೆತೇಬಿಟ್ಟಿದ್ದ ಶಾರುಖ್ ಗೆ ಬಳಿಕ ತಪ್ಪಿನ ಅರಿವಾಗಿ, ಕೂಡಲೇ ಪ್ರೀತಿ ಝಿಂಟಾ ಬಳಿ ಕ್ಷಮೆ ಕೇಳಿದ್ದ ಶಾರೂಖ್, ‘ದಿಲ್ ಸೆ’ ಸಿನಿಮಾದ ಯಶಸ್ಸಿನ ಹಿರಿಮೆ ಶ್ರೇಯ ಪ್ರೀತಿಗೂ ಸೇರುತ್ತೆ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!