Friday, April 26, 2024
Homeಕರಾವಳಿಬಂಟ್ವಾಳ: ರೌಡಿಶೀಟರ್ ಚೆನ್ನೆ ಫಾರೂಕ್ ಕೊಲೆ ಆರೋಪಿಯ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್...

ಬಂಟ್ವಾಳ: ರೌಡಿಶೀಟರ್ ಚೆನ್ನೆ ಫಾರೂಕ್ ಕೊಲೆ ಆರೋಪಿಯ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್…

spot_img
- Advertisement -
- Advertisement -

ಮಂಗಳೂರು:  ನಿನ್ನೆ ಬಂಟ್ವಾಳದಲ್ಲಿ ನಡೆದ ರೌಡಿಶೀಟರ್ ಚೆನ್ನೆ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ಮೇಲೆ ಪೊಲೀಸರು ಫೈರಿಂಗ್  ನಡೆಸಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನೆಲ್ಯಾಡಿ ಸಮೀಪದ ಉದನೆಯ ಪರ್ನಡ್ಕದಲ್ಲಿ ಗುಂಡು ಹಾರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಆರೋಪಿ ರೌಡಿಶೀಟರ್ ಇಬ್ರಾಹಿಂ ಖಲೀಲ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ.

ಪಿ.ಎಸ್.ಐ ಅವಿನಾಶ್

ಆರೋಪಿಯ ಕಾರನ್ನು ಪಿ.ಎಸ್.ಐ ಅವಿನಾಶ್ ಮತ್ತು ಪ್ರಸನ್ನ ಚೇಸ್  ಮಾಡಿಕೊಂಡು ಹೋಗುತ್ತಿದ್ದ ವೇಳೆ ಪ್ರಸನ್ನ ಅವರ ಮೇಲೆ ಆರೋಪಿ ತಲವಾರಿನಿಂದ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಅವಿನಾಶ್ ಅವರ ಫೈರಿಂಗ್ ನಡೆಸಿದ್ದಾರೆ. ಇನ್ನೂ ಮೂವರು ಆರೋಪಿಗಳಲ್ಲಿ ಇಬ್ಬರು ನೇಲ್ಯಡ್ಕ ಸಮೀಪ ಹರಿಯುತ್ತಿರುವ ಗುಂಡ್ಯ ನದಿಗೆ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾದ ಇಬ್ಬರ ಬಂಧನಕ್ಕೆ ಉಪ್ಪಿನಂಗಡಿ ಎಸ್.ಐ.ಈರಯ್ಯ ಮುಂದಾಗಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ಅಲ್ಲದೇ ಘಟನೆಯಲ್ಲಿ ಪಿ.ಎಸ್.ಐ ಪ್ರಸನ್ನ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಶೂಟೌಟ್ ನಡೆದ ಸ್ಥಳ

ಇನ್ನು ಕಾಲಿಗೆ ಗುಂಡೇಟಿನಿಂದ ಗಾಯವಾಗಿದ್ದ ಇಬ್ರಾಹಿಂಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಿನ್ನೆ ಸಂಜೆ ವೈಯಕ್ತಿಕ ದ್ವೇಷದಿಂದ ಮಾರಕಾಯುಧಗಳಿಂದ ದಾಳಿ ಮಾಡಿ ರೌಡಿ ಶೀಟರ್ ಚೆನ್ನೆ ಫಾರೂಕ್ ಹತ್ಯೆ ಮಾಡಲಾಗಿತ್ತು. ಕಾರಲ್ಲಿ ಬಂದ ದುಷ್ಕರ್ಮಿಗಳು ಫಾರೂಕ್ ನನ್ನು ತಲವಾರಿನಿಂದ ಹಿಗ್ಗಾಮುಗ್ಗ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದರು. ಘಟನೆ ನಡೆದ ಕೂಡಲೇ ಫಾರೂಕ್ ನನ್ನು ಪೊಲೀಸ್ ಜೀಪ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶೂಟೌಟ್ ನಡೆದ ಸ್ಥಳ

ರೌಡಿ ಶೀಟರ್ ಖಲೀಲ್
ಪ್ರಕರಣದ ಆರೋಪಿ ಕಲ್ಲಡ್ಕ ನಿವಾಸಿ ಪ್ರಸಕ್ತ ನಂದಾವರದಲ್ಲಿ ವಾಸವಿರುವ ಖಲೀಲ್, ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಯಲ್ಲಿ ಈತನ ಹೆಸರಿತ್ತು. ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು ಇತ್ತೀಚೆಗೆ ನಡೆದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು.

- Advertisement -
spot_img

Latest News

error: Content is protected !!