- Advertisement -
- Advertisement -
ಮಂಗಳೂರು: ಕಳೆದ 2 ವಾರಗಳ ಹಿಂದೆ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ವಿರುದ್ಧ ಮೈಕಾಲ್ತೊ ಬಿಸಯಾ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹರಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕಿನ ಕಬಕ ಸಮೀಪದ ಉರಿಮಜಲು ನಿವಾಸಿ ಅಬ್ದುಲ್ ಬಶೀರ್ ಯಾನೆ ನಿಸಾರ್ ಅಹಮ್ಮದ್ ಹಾಗೂ ಪಣಕಜೆ ನಿವಾಸಿ ಮಹಮ್ಮದ್ ಇಲ್ಯಾಸ್ ಬಂಧಿತ ಆರೋಪಿಗಳಾಗಿದ್ದಾರೆ.
ಮೈಕಾಲ್ತೊ ಬಿಸಯಾ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಕೊರೊನಾಕ್ಕಿಂತಲೂ ಭಯಾನಕ ಮೋದಿ, ಒಂದೇ ದಿನ ಎರಡು ಸಾವಿರ ಜನರನ್ನು ಬಲಿ ತೆಗೆದುಕೊಂಡ ಮೋದಿ ವೈರಸ್, ನಮ್ಮ ದೇಶದಲ್ಲಿ ಅತೀ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಜೀವಂತ ಕೊರೊನಾ ಎಂದು ಅಮಿತ್ ಶಾ ಫೋಟೋವನ್ನು ಎಡಿಟ್ ಮಾಡಲಾಗಿತ್ತು.
ಅಮಿತ್ ಶಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯ ಫೋಟೋವನ್ನು ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಾರ್ಯಚರಣೆ ನಡೆಸಿದ ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
- Advertisement -