Saturday, August 20, 2022
Homeಕರಾವಳಿಬಡವರ ಪಾಲಿನ ಸಂಜೀವಿನಿ ಧರ್ಮಸ್ಥಳ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ

ಬಡವರ ಪಾಲಿನ ಸಂಜೀವಿನಿ ಧರ್ಮಸ್ಥಳ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ

- Advertisement -
- Advertisement -

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಯೋಜನೆಯು ತನ್ನ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ ಬಡಜನರಿಗೆ ನಿರಂತರ ಅರೋಗ್ಯ ಸೇವೆಯೊಂದಿಗೆ ಅಭಯ ದಾನ ನೀಡುತ್ತಿದೆ. ಪ್ರಸಕ್ತ ವರ್ಷ ಕೊರೊನಾ ಸಮಸ್ಯೆ ನಡುವೆಯೂ ಯಾವುದೆ ಪ್ರಚಾರ ಇಲ್ಲದೆ ಅತೀ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿರುವುದು ಪೂಜ್ಯ ಹೆಗ್ಗಡೆಯವರು ಬಡ ಜನರ ಮೆಲೆ ಇಟ್ಟಿರುವ ಕಾಳಜಿ ಎದ್ದು ತೋರಿಸುತ್ತಿದೆ.

ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ನೊಂದಾಯಿಸಿದ ರಾಜ್ಯದ ಹಲವಾರು ಆಸ್ಪತ್ರೆಗಳ ಮೂಲಕ ನಿರಂತರವಾಗಿ ಈ ಸೇವೆಯನ್ನು ಹೆಲ್ತ್ ಇಂಡಿಯಾ ಕಂಪನಿ ನಿರ್ವಹಣೆ ಮಾಡುತ್ತಿದೆ. ಇದರಲ್ಲಿ ನೊಂದಾಯಿಸಿದ ಯೋಜನೆಯ ಪಾಲುದಾರ ಕುಟುಂಬದವರೂ ಈ ಕಾರ್ಯಕ್ರಮವನ್ನು ಅನಾರೊಗ್ಯ ಸಮಯದಲ್ಲಿ ನಿರಂತರ ಉಪಯೊಗಿಸಿಕೊಳ್ಲುತ್ತಿದ್ದಾರೆ.

ಜನರ ಆರೊಗ್ಯದ ಕಡೆ ಸದಾ ಕಳಕಳಿಯನ್ನು ಹೊಂದಿರುವ ಧರ್ಮಸ್ಥಳ ಯೋಜನೆಯು ಇಂತಹ ಪರಿಸ್ಥಿತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಸುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಆರಾಧ್ಯ ಮೂರ್ತಿ ಶ್ರೀ ಮಂಜುನಾಥ ಸ್ವಾಮಿಯ ಕೃಪೆ, ಪೂಜ್ಯ ಧರ್ಮಾಧಿಕಾರಿಗಳ ನಿರಂತರ ಮಾರ್ಗದರ್ಶನ ಮತ್ತು ಯೋಜನೆಯ ಕಾರ್ಯನಿರ್ವಾಹಕ ನಿರ್ದೆಶಕರಾದ ಡಾ.ಎಲ್.ಎಚ್.ಮಂಜುನಾಥ ಇವರ ನಿರಂತರ ಕಾಳಜಿ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದೆ.

ಪ್ರಸ್ತುತ ವರ್ಷ ರಾಜ್ಯದ ವಿವಿಧ ಭಾಗದ ನೊಂದಾಯಿತ ಆಸ್ಪತ್ರಗಳಲ್ಲಿ 400 ಕ್ಕೂ ಮಿಕ್ಕಿದ ಸದಸ್ಯರು ಇದರ ಪ್ರಯೋಜನ ಪಡೆದು ಆರೊಗ್ಯ ಶುಶ್ರುಷೆ ಪಡೆದಿರುತ್ತಾರೆ. ಈ ವರ್ಷ ಈ ಕಾರ್ಯಕ್ರಮಕ್ಕೆ‌ ರೂ 39 ಲಕ್ಷ ಮೊತ್ತ ವಿನಿಯೋಗ ಮಾಡಲಾಗಿದೆ.

- Advertisement -
- Advertisment -

Latest News

error: Content is protected !!