Friday, July 12, 2024
Homeತಾಜಾ ಸುದ್ದಿಭಾರತದಲ್ಲಿ ಒಂದೇ ದಿನ 1340 ಜನರಿಗೆ ಕೊರೊನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 11,312 ಕ್ಕೆ...

ಭಾರತದಲ್ಲಿ ಒಂದೇ ದಿನ 1340 ಜನರಿಗೆ ಕೊರೊನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 11,312 ಕ್ಕೆ ಏರಿಕೆ

spot_img
- Advertisement -
- Advertisement -

ನವದೆಹಲಿ : ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿದ್ದು, ಮಂಗಳವಾರ ಒಂದೇ ದಿನ ದೇಶಾದ್ಯಂತ 1340 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಮಂಗಳವಾರ ಭಾರತದಲ್ಲಿ ಕೊರೊನಾ ವೈರಸ್ ಗೆ 43 ಜನರು ಬಲಿಯಾಗಿದ್ದು, ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 381 ಕ್ಕೆ ತಲುಪಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್ ಡೌನ್ ಅನ್ನು ಮೇ. 3 ರವರೆಗೆ ವಿಸ್ತರಣೆ ಘೋಷಿಸಿದ ಬೆನ್ನಲ್ಲೇ ಈ ಅಂಕಿ ಅಂಶಗಳು ಹೊರಬಿದ್ದಿದ್ದು, ಮತ್ತಷ್ಟು ಅತಂಕ ಶುರುವಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ಸೋಂಕಿತರ ಸಂಖ್ಯೆ 10,815 ಕ್ಕೆ ತಲುಪಿದ್ದರೆ, ಪಿಟಿಐ ಸುದ್ದಿಸಂಸ್ಥೆ ದೇಶವ್ಯಾಪಿ ಸೋಂಕಿನ ಪ್ರಮಾಣವನ್ನು 11,312 ಕ್ಕೆ ತಲುಪಿದೆ

- Advertisement -
spot_img

Latest News

error: Content is protected !!