ನವದೆಹಲಿ : ದೇಶದಲ್ಲಿ ಮಾರಕ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮೇ .3 ರವರೆಗೆ ಅಂದರೆ ಇನ್ನು 19 ದಿನಗಳವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ .
ಈ ನಡುವೆ ಸದಾ ವಿವಾದದ ಮೂಲಕ ಸುದ್ದಿಯಾಗುವ ಟಾಲಿವುಡ್ ನಟಿ ಶ್ರೀ ರೆಡ್ಡಿ ಇದೀಗ ಪ್ರಧಾನಿ ಮೋದಿಯವರ ನಿರ್ಧಾರದ ಕುರಿತು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ.
ಏನದು ನಟಿ ಟ್ವೀಟ್..?
ಪ್ರಧಾನಿ ಮೋದಿ ಈ ನಿರ್ಧಾರದ ಕುರಿತು ನಟಿ ವ್ಯಂಗ್ಯವಾಗಿ ಮಾತನಾಡಿದ್ದು, ಮೇ 3ರ ನಂತರ ಕೊರೊನಾ ಆಕಾಶಕ್ಕೆ ಶಿಫ್ಟ್ ಆಗಲಿದೆಯೇ, ಬಡ ಜನತೆ ಬಗ್ಗೆ ಚಿಂತಿಸಿ, ಅವರನ್ನು ಉಳಿಸಿ. ಅಗತ್ಯ ವಸ್ತುಗಳನ್ನು ಕೊಳ್ಳಲಿಕ್ಕಾದರೂ ಅವರಿಗೆ ಹಣ ನೀಡಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಮೇ 3ರ ನಂತರವೂ ಕೊರೊನಾ ಸೋಂಕಿತ ವ್ಯಕ್ತಿ ಹೊರಗಿದ್ದರೆ, ಆತ ಸಹ ಲಕ್ಷಾಂತರ ಜನರಿಗೆ ವೈರಸ್ ಹರಡಿಸುತ್ತಾನೆ. ಆಗ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆ ಶ್ರೀ ರೆಡ್ಡಿಯವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದು, ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.