- Advertisement -
- Advertisement -
ನವದೆಹಲಿ : ನವದೆಹಲಿ : ಮಾರಕ ಕೊರೊನಾ ವೈರಸ್ ನಿಯಂತ್ರಣಸ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಸೋಂಕು ಹರಡದಂತೆ ತಡೆಗಟ್ಟಲು ಈಗಾಗಲೇ ಮೇ.3ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ವೇಳೆ, ಅನುಸರಿಸಬೇಕಾದ ಕ್ರಮಗಳು ಹಾಗೂ ಕೆಲವು ಅಗತ್ಯ ಸೇವೆಗೆ ವಿನಾಯಿತಿ ನೀಡಲಾಗಿದ್ದು, ಈ ಕುರಿತಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.
- ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಸುಮಾರು 2 ಪುಟಗಳಿದ್ದು, ಇದರಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಇಲಾಖೆಗಳು ಲಾಕ್ ಡೌನ್ ವಿಸ್ತರಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ.
- ಈ ಮಾರ್ಗಸೂಚಿಯಲ್ಲಿ ದಿನಸಿ, ಔಷಧಿ, ಹಣ್ಣು, ಮೀನು ಮಾಂಸ ಮಾರಾಟಕ್ಕೆ ತರಕಾರಿ, ರಸಗೊಬ್ಬರ, ಬೀಜ, ಕೀಟ ನಾಶಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಮೇ 3ರವೆರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. ಇನ್ನು ಪ್ರಿಂಟ್, ಟೆಲಿಕಾಮ್, ಮೀಡಿಯಾ, ಇಂಟರ್ ನೆಟ್ ಸೇವೆ, ಇ-ಕಾಮರ್ಸ್, ಕೇಬಲ್ ಆಪರೇಟರ್ ಸಿಬ್ಬಂದಿಗೂ ವಿನಾಯಿತಿ ನೀಡಲಾಗಿದೆ.
- ಇದೇ ವೇಳೆ ವಿಮೆ ಕಂಪನಿಗಳು, ಬ್ಯಾಂಕ್, ಎಟಿಎಂ ಸೇವೆಗೂ ವಿನಾಯಿತಿ ನೀಡಲಾಗಿದೆ. ಬ್ಯಾಂಕ್ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಬಹುದಾಗಿದೆ. ಪೆಟ್ರೋಲ್ ಬಂಕ್, ವಿದ್ಯುತ್ ನಿಗಮ, ಗ್ಯಾಸ್ ಎಜೆನ್ಸಿಗಳಿಗೂ ವಿನಾಯಿತಿ ನೀಡಲಾಗಿದೆ. ಕೋಲ್ಡ್ ಸ್ಟೋರೇಜ್, ಎಪಿಎಂಸಿ ಗಳಿಗೂ ಸಡಿಲಿಕೆ ನೀಡಲಾಗಿದೆ.
- ಎಲ್ಲ ಶೈಕ್ಷಣಿಕ ಸಂಸ್ತೆಗಳು ಬಂದ್, ಟ್ರೈನಿಂಗ್, ಸಂಶೋಧನೆ, ಕೋಚಿಂಗ್ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ವಿಚಾರ ಸಂಕಿರಣ, ಧಾರ್ಮಿಕ ಸಭೆ, ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ.
ಒಂದು ವೇಳೆ, ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೆ 20ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ವಿಮಾನಯಾನ, ರೈಲು ಸಂಚಾರ, ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ. - ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದು, ಕೆಲಸದ ಸ್ಥಳಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ನಿಷಿದ್ಧ, ಅಲ್ಲದೇ, ಇಂತಹ ಚಟುವಟಿಕೆಗಳಲ್ಲಿ ತೊಡಗಿದವರಿಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.
- Advertisement -