- Advertisement -
![]()
- Advertisement -
ಸುಳ್ಯ; ಕಳ್ಳತನ ಪ್ರಕರಣ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.
ಸುಳ್ಯ ಅಜ್ಜಾವರ ನಿವಾಸಿ ಎ ಎಮ್ ಅಜೀಜ್ ಎಂಬಾತನ ವಿರುದ್ಧ ಎಸ್ ಸಿ ಜೆ ಮತ್ತು ಜೆ ಎಮ್‌ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ದಮಯಂತಿರವರು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷಗಳ ಸಾದಾ ಕಾರಾಗೃಹ ವಾಸ ಹಾಗೂ 5000 ದಂಡವನ್ನು , ದಂಡ ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸದ ಶಿಕ್ಷೆ ಹಾಗೂ ಅ.ಕ್ರ: 96/2006 ರಲ್ಲಿ ಕಲಂ 457 ದರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ 5000 ದಂಡವನ್ನು ವಿಧಿಸಿದ್ದು, ದಂಡವನ್ನು ಕಟ್ಟಲು ತಪ್ಪಿದ್ದಲ್ಲಿ 45 ದಿನಗಳ ಕಾಲ ಸಾದಾ ಕಾರಾಗೃಹ ವಾಸ ಹಾಗೂ ಕಲಂ 380 ದರಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸವನ್ನು ಹಾಗೂ ಐದು ಸಾವಿರ ದಂಡ ವಿಧಿಸಿ ಆದೇಶಿಸಿರುತ್ತಾರೆ
- Advertisement -


