ರಾಯ್ ಪುರ್: ಮನೆ ಕೆಲಸದ ಮಹಿಳೆಯೊಂದಿಗೆ ಸರಸವಾಡುತ್ತಿದ್ದಗಲೇ ಪತಿ ಪತ್ನಿಯ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ದೃಶ್ಯವನ್ನು ಕಂಡ ಪತ್ನಿ ವಿಡಿಯೋ ಮಾಡಿಕೊಂಡಿದ್ದಾಳೆ.
ಛತ್ತೀಸ್ ಘಡದ ರಾಯ್ ಪುರ ಸಮೀಪದ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿ ಪತ್ನಿಯೊಂದಿಗೆ ವಾಸವಾಗಿದ್ದು, ಕೆಲವು ವರ್ಷಗಳಿಂದ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಆಗಾಗ ಪತ್ನಿಗೆ ಗೊತ್ತಾಗದಂತೆ ಬೆಡ್ರೂಮ್ ನಲ್ಲಿ ಮನೆ ಕೆಲಸದ ಮಹಿಳೆ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
ಪತ್ನಿ ಮನೆಯಿಂದ ಹೊರ ಹೋದ ಕೂಡಲೇ ಮಹಿಳೆ ಜೊತೆಗೆ ಸೇರುತ್ತಿದ್ದ. ಒಮ್ಮೆ ಬೇಗನೇ ಮನೆಗೆ ಬಂದ ಪತ್ನಿ ಬೆಡ್ ರೂಮ್ ಗೆ ಹೋದಾಗ ಮನೆ ಕೆಲಸದ ಮಹಿಳೆ ಜೊತೆ ಪತಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿದೆ. ಕುಟುಂಬದ ಗೌರವ, ಮರ್ಯಾದೆ ಹಾಳಾಗುತ್ತದೆ ಎಂದು ಆಕೆ ಯಾರಿಗೂ ಹೇಳಿರಲಿಲ್ಲ.
ಇದನ್ನೇ ವೀಕ್ ನೆಸ್ ಎಂದು ತಿಳಿದ ಪತಿ, ಪತ್ನಿ ಮನೆಯಲ್ಲಿದ್ದರೂ ಮಹಿಳೆ ಜೊತೆಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದ ಇದರಿಂದ ನೊಂದ ಪತ್ನಿ ಹಲವು ಬಾರಿ ಮನವಿ ಮಾಡಿದರೂ ಆತ ಕೇಳದೆ ಪತ್ನಿಗೆ ಹಿಂಸೆ ನೀಡಿದ್ದು ಕೊನೆಗೆ ಪತಿಯ ಅಕ್ರಮ ಸಂಬಂಧ ಬಹಿರಂಗಪಡಿಸಲು ಮುಂದಾದ ಪತ್ನಿ ಮನೆ ಕೆಲಸದ ಮಹಿಳೆಯೊಂದಿಗೆ ಪತಿ ಲೈಂಗಿಕ ಕ್ರಿಯೆ ನಡೆಸುವಾಗಲೇ ಕಿಟಕಿಯಿಂದ ವಿಡಿಯೋ ಮಾಡಿಕೊಂಡಿದ್ದಾಳೆ. ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದು ಸಂಬಂಧಿಕರು, ಸ್ಥಳೀಯರಿಗೆ ವಿಷಯ ತಿಳಿಸಿದ್ದಲ್ಲದೇ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ.