- Advertisement -
- Advertisement -
ತಲಪಾಡಿ: ಕಾಸರಗೋಡು-ಮಂಗಳೂರು ನಡುವಿನ ಅಂತಾರಾಜ್ಯ ಗಡಿ ಪ್ರದೇಶವಾದ ತಲಪಾಡಿಯ ಸಾಂತ್ಯಮೇಗಿನ ಮನೆತನದ ಮಹಾಬಲ ಪೂಂಜ ಇವರು ಇಂದು ಬೆಳಿಗ್ಗೆ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಲ್ಲಿ ಹೃದಯಾಘಾತಗೊಂಡು ನಿಧನ ಹೊಂದಿದರು.
ತಲಪಾಡಿ ಮತ್ತು ಕಿನ್ಯ ಪರಿಸರದಲ್ಲಿ ಅನೇಕ ಜನಹಿತ ಕಾರ್ಯಕ್ರಮಗಳ ರೂವಾರಿಯಾಗಿದ್ದ ಇವರು ಓರ್ವ ಕೊಡುಗೈ ದಾನಿಯಾಗಿದ್ದರು. ಪ್ರಸ್ತುತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೇವಿಪುರ ಇದರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಿನ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಗಿದ್ದರು.
- Advertisement -