- Advertisement -
- Advertisement -
ಪುತ್ತೂರು: ಕೊರೋನಾ (ಕೋವಿಡ್-19) ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಪುತ್ತೂರು ಶಾಸಕರ ಕಚೇರಿ ವಾರ್ ರೂಮ್ ನೇತೃತ್ವದಲ್ಲಿ ಪುತ್ತೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಭವಿತಾ ಸಾವಜಾನಿ ಇದರ ಕೊಡುಗೆಯಾಗಿ ನೀಡಿದ ಉಚಿತ ಸ್ಯಾನಿಟರ್ ಪ್ಯಾಡ್ ನ್ನು ಪುತ್ತೂರು ನಗರ ಸಭೆ ಮತ್ತು ಗ್ರಾಮಾಂತರ ಭಾಗದಲ್ಲಿ ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಿಗೆ ಹಂಚಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷರಾದ ದಿನೇಶ್ ಮೆದು, ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಶ್ರೀಮತಿ ಗೌರಿ ಬನ್ನೂರು, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಮದಾಸ್ ಹಾರಾಡಿ, ಚಂದ್ರಶೇಖರ ಬಪ್ಪಳಿಗೆ, ವಿಶ್ವನಾಥ ಕುಲಾಲ್ ಮತ್ತು ಭವಿನ್ ಶೇಟ್ ಉಪಸ್ಥಿತರಿದ್ದರು.
- Advertisement -