Thursday, May 9, 2024
Homeಕರಾವಳಿಪುತ್ತೂರಿನಿಂದ ನಾಪತ್ತೆಯಾಗಿದ್ದ ಯುವತಿ ಮುಂಬೈಯಲ್ಲಿ ಪತಿಯೊಂದಿಗೆ ಪತ್ತೆ

ಪುತ್ತೂರಿನಿಂದ ನಾಪತ್ತೆಯಾಗಿದ್ದ ಯುವತಿ ಮುಂಬೈಯಲ್ಲಿ ಪತಿಯೊಂದಿಗೆ ಪತ್ತೆ

spot_img
- Advertisement -
- Advertisement -

ಪುತ್ತೂರು: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ನಿವಾಸಿ ಮನೀಷಾ ರೈ (22), ಇಂದು ತನ್ನ ಭಾವಿ ಪತಿಯೊಂದಿಗೆ ಮುಂಬೈಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಗುರುವಾರ (ಆ.8) ದಂದು ವೃತ್ತಿಯ ನಿಮಿತ್ತ ಪುತ್ತೂರಿನ ಕಲ್ಲಾರೆಗೆ ಬಂದಿದ್ದ ಪುಣ್ಚಪ್ಪಾಡಿ ಗ್ರಾಮದ ನಡುಮನೆ ಚಂದ್ರಹಾಸ ರೈಯ ಪುತ್ರಿ ಮನೀಷಾ ರೈ ನಂತರ ಸಂಜೆ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಕುರಿತು ಚಂದ್ರಹಾಸ ರೈ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಮನಿಷಾ ರೈ ತನ್ನ ಪ್ರಿಯಕರ, ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಬಾಲಕೃಷ್ಣ ಜೊತೆ ಮುಂಬೈನಲ್ಲಿ ವಿವಾಹವಾಗಿದ್ದು, ಇನ್ನು ನನ್ನನ್ನು ಹುಡುಕಬೇಡಿ. ನಾನು ನನ್ನ ಪ್ರಿಯಕರನೊಂದಿಗೆ ಕ್ಷೇಮವಾಗಿದ್ದೇನೆ ಎಂದು ಹೆತ್ತವರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!