Monday, June 8, 2026
Homeತಾಜಾ ಸುದ್ದಿಪಕ್ಷದ‌ ಘಟಕವನ್ನು ವಿಸರ್ಜಿಸಿದ ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ಎಚ್‌.ಡಿ ದೇವೇಗೌಡ

ಪಕ್ಷದ‌ ಘಟಕವನ್ನು ವಿಸರ್ಜಿಸಿದ ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ಎಚ್‌.ಡಿ ದೇವೇಗೌಡ

- Advertisement -
- Advertisement -

ನವದೆಹಲಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಕೇರಳ ಜೆಡಿಎಸ್ ಘಟಕವನ್ನು ವಿಸರ್ಜಿಸಿದ್ದಾರೆ. ಕೇರಳ ಜೆಡಿಎಸ್ ಪಕ್ಷವನ್ನು ಅಧ್ಯಕ್ಷರು ದುರ್ಬಲಗೊಳಿಸುತ್ತಿರುವುದು ಕೇಳಿಬಂದ ಹಿನ್ನೆಲೆಯಲ್ಲಿ ಪಕ್ಷದ ಘಟಕವನ್ನು ವಿಸರ್ಜನೆ ಮಾಡಲಾಗಿದೆ.

ಇದೇ ವೇಳೆ ಪಕ್ಷದ ಸಂಘಟನಾತ್ಮಕ ಕಾರ್ಯಗಳ ಮೇಲುಸ್ತುವಾರಿ ವಹಿಸಲು ಮಧ್ಯಂತರ ರಾಜ್ಯ ಘಟಕ ರಚನೆ ಮಾಡಿರುವ ದೇವೇಗೌಡರು, ಈ ಕೂಡಲೇ ಜಾರಿಗೆ ಬರುವಂತೆ ಮಾಜಿ ಸಚಿವ ಮಾಥ್ಯು ಟಿ ಥಾಮಸ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಕುರಿತಂತೆ ವಿವರಣೆ ನೀಡಲು ನೀಡಲಾಗಿದ್ದ ನೋಟಿಸ್ ಗೆ ಕೇರಳ ಜೆಡಿಎಸ್ ಅಧ್ಯಕ್ಷ ಸಿ.ಕೆ. ನಾನು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಪಕ್ಷವನ್ನು ಅಸ್ಥಿರಗೊಳಿಸುವ ರೀತಿ ಅವರು ವರ್ತಿಸಿದ್ದಾರೆ ಎಂದು ಹೇಳಲಾಗಿದ್ದು, ಪಕ್ಷ ಸಂಘಟನೆಗಾಗಿ ಮತ್ತು ಪ್ರಮುಖ ತೀರ್ಮಾನ ಕೈಗೊಳ್ಳಲು ರಚಿಸಲಾಗಿದ್ದ ಕೋರ್ ಕಮಿಟಿಯನ್ನು ಕೂಡ ಅವರು ಸಂಪರ್ಕಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಜೆಡಿಎಸ್ ಘಟಕವನ್ನು ವಿಸರ್ಜನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕೇರಳ ಜೆಡಿಎಸ್ ನ ಈ ಹಿಂದಿನ ಅಧ್ಯಕ್ಷ ಸಿ.ಕೆ.ನಾಣು ಅವರು ಕೇರಳದ ಪ್ರಭಾವಿ ನಾಯಕರಾಗಿದ್ದಾರೆ. ಕೇರಳದ ಜೆಡಿಎಸ್ ಘಟಕವು ಎಲ್‌ಡಿಎಫ್‌ ಮೈತ್ರಿಕೂಟದಲ್ಲಿದ್ದು, ಪಿಣರಾಯಿ ವಿಜಯನ್ ಸರ್ಕಾರದ ಪಾಲುದಾರ ಪಕ್ಷವೂ ಹೌದು. ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಹೊಂದಿದೆ. ಚಿತ್ತೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ. ಕೃಷ್ಣಮೂರ್ತಿ ಅವರು ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾರೆ. ಸಿ.ಕೆ ನಾಣು ಅವರನ್ನು ಕಳೆದ ವರ್ಷ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ವಡಗರ ಕ್ಷೇತ್ರದಿಂದ ಅವರು ವಿಧಾನಸಭೆಗೆ ಜೆಡಿಎಸ್‌ ಚಿಹ್ನೆಯಡಿ ಆಯ್ಕೆಯಾಗಿದ್ದಾರೆ.

- Advertisement -

Latest News

error: Content is protected !!