Friday, June 5, 2026
Homeಕರಾವಳಿಉಡುಪಿಉಡುಪಿ: ಹೋಟೆಲ್ ನಲ್ಲಿ ಊಟ ಮುಗಿಸಿ ಬರುತ್ತಿದ್ದ ಯುವಕ ಕುಸಿದು ಮೃತ್ಯು.!

ಉಡುಪಿ: ಹೋಟೆಲ್ ನಲ್ಲಿ ಊಟ ಮುಗಿಸಿ ಬರುತ್ತಿದ್ದ ಯುವಕ ಕುಸಿದು ಮೃತ್ಯು.!

- Advertisement -
- Advertisement -

ಉಡುಪಿ: ಇಲ್ಲಿಯ ಪಂದುಬೆಟ್ಟುವಿನ ಬಾರೊಂದರಲ್ಲಿ ಊಟ ಮುಗಿಸಿ ಹೊರ ಬರುತ್ತಿದ್ದಾಗ ಯುವಕನೋರ್ವ ಅಲ್ಲೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಉದ್ಯಾವರ ಸಂಪಿಗೆನಗರ ನಿವಾಸಿ 23 ವರುಷದ ಸಚಿನ್ ಎಂದು ಗುರುತಿಸಲಾಗಿದೆ.

ಸಚಿನ್ ತನ್ನ ಸ್ನೇಹಿತರೊಂದಿಗೆ ಬಾರೊಂದರಲ್ಲಿ ಊಟ ಮಾಡಿ ಹೊರ ಬರುತ್ತಿದ್ದ ಸಂದರ್ಭದಲ್ಲಿ, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ನೇಹಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಅದಾಗಲೇ ಸಚಿನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!