Thursday, June 4, 2026
Homeಕರಾವಳಿಪುತ್ತೂರು: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ!

ಪುತ್ತೂರು: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ!

- Advertisement -
- Advertisement -

ಪುತ್ತೂರು: ತಾಲೂಕಿನ ಕಬಕ ಗ್ರಾಮದ ನೆಹರು ನಗರ ಎಂಬಲ್ಲಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ರಾತ್ರಿಯಾದರೂ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಅ.9ರಂದು ನಡೆದಿದೆ.

ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ಬಾಲಕ ನಾಪತ್ತೆಯಾದ ಕುರಿತು ಪೊಲೀಸರಿಗೆ ತಡವಾಗಿ ದೂರು ನೀಡಲಾಗಿದೆ. ನೆಹರು ನಗರ ನಿವಾಸಿ ಮಹಮ್ಮದ್ ಆಲಿಯವರ 9 ವರ್ಷದ ಪುತ್ರ ಫೈರೋಜ್ ನಾಪತ್ತೆಯಾದ ಬಾಲಕ.

ಸಂಜೆ ವೇಳೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಫೈರೋಜ್, ರಾತ್ರಿ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಆಸುಪಾಸಿನಲ್ಲಿ ಹುಡುಕಾಡಿದರು. ಬಳಿಕ ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಅ.11ರಂದು ಬಾಲಕನ ತಾಯಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!