Tuesday, July 14, 2026
Homeತಾಜಾ ಸುದ್ದಿರಸ್ತೆ ನಿರ್ಮಾಣ ವಿಚಾರಕ್ಕೆ ನಟ ಯಶ್ ತಂದೆ ತಾಯಿಯೊಂದಿಗೆ ಗ್ರಾಮಸ್ಥರ ಗಲಾಟೆ

ರಸ್ತೆ ನಿರ್ಮಾಣ ವಿಚಾರಕ್ಕೆ ನಟ ಯಶ್ ತಂದೆ ತಾಯಿಯೊಂದಿಗೆ ಗ್ರಾಮಸ್ಥರ ಗಲಾಟೆ

- Advertisement -
- Advertisement -

ಹಾಸನ : ರಸ್ತೆ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಯಶ್‌ ತಂದೆ-ತಾಯಿ ಜೊತೆ ಗ್ರಾಮಸ್ಥರು ಗಲಾಟೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ದುದ್ದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ದುದ್ದ ಬಳಿ ಇರುವ ತಿಮ್ಮೇನಹಳ್ಳಿಯಲ್ಲಿ ಯಶ್ ತಂದೆ ಅರುಣ್‌ಕುಮಾರ್, ತಾಯಿ ಪುಷ್ಪಾ ತಮ್ಮ ಜಮೀನ ಕೆಲಸ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಇಲ್ಲಿ ಕೆಲಸ ಮಾಡಬೇಡಿ ಎಂದು ತಡೆದಿದ್ದಾರೆ ಎನ್ನಲಾಗಿದೆ.  ಅಲ್ಲದೇ ಕೆಲ ಹೊತ್ತು ವಾಗ್ವಾದ ಕೂಡ ನಡೆದಿದೆ.

ಘಟನಾ ಸ್ಥಳಕ್ಕೆ ದುದ್ದ ಪೊಲೀಸರು ಭೇಟಿ ನೀಡಿ ಮಧ್ಯಸ್ಥಿಕೆ ವಹಿಸಿ ಬಳಿಕ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

- Advertisement -

Latest News

error: Content is protected !!