Thursday, June 4, 2026
Homeಕರಾವಳಿಬೆಳ್ತಂಗಡಿ: ಮರ ಕಡಿಯುವಾಗ ಮರ ಬಿದ್ದು ಮೂವರು ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಮರ ಕಡಿಯುವಾಗ ಮರ ಬಿದ್ದು ಮೂವರು ಸ್ಥಳದಲ್ಲೇ ಸಾವು

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆಯಲ್ಲಿ ಮರ ಕಡಿಯುತ್ತಿದ್ದ ವೇಳೆ ಮರ ಮೂವರ ಮೇಲೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಪಟ್ರಮೆ ಗ್ರಾಮದ ಅನಾರು ಬಳಿ ಕಾಯಿಲ ಸಮೀಪ ಧೂಪದ ಮರವೊಂದನ್ನು ಕಡಿದು ಉರುಳಿಸುವ ವೇಳೆ ಮರದ ಅಡಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.

ಮಧ್ಯಾಹ್ನದ ವೇಳೆ ಮರ ತುಂಡರಿಸುವ ವೇಳೆ ಈ ಅವಘಡ ಸಂಭವಿಸಿದ್ದು, ಮೃತರನ್ನು ಪಟ್ರಮೆ ರಾಮಣ್ಣ ಕುಂಬಾರ ಅವರ ಪುತ್ರ ಪ್ರಶಾಂತ್ (21 ವ), ಸೇಸಪ್ಪ ಪೂಜಾರಿ ಅವರ ಪುತ್ರ ಸ್ವಸ್ತಿಕ್ (23 ವ) ಮತ್ತೋರ್ವ ಉಪ್ಪಿನಂಗಡಿ ನಿವಾಸಿ ಗಣೇಶ್ (38) ಎಂದು ತಿಳಿದುಬಂದಿದೆ. ಉಳಿದ 2 ಜನ ಯಾವುದೇ ಗಾಯಗಳಿಲ್ಲದೆ ಪಾರಾಗಿರುತ್ತಾರೆ.

ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ಧೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ಕುಮಾರ್, ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!