Sunday, June 7, 2026
Homeಕರಾವಳಿಧರ್ಮಸ್ಥಳ: ನಿವೃತ್ತ ಎ.ಎಸ್.ಐ ಪರಮೇಶ್ವರ ಪೂಜಾರಿ ನಿಧನ!

ಧರ್ಮಸ್ಥಳ: ನಿವೃತ್ತ ಎ.ಎಸ್.ಐ ಪರಮೇಶ್ವರ ಪೂಜಾರಿ ನಿಧನ!

- Advertisement -
- Advertisement -

ಧರ್ಮಸ್ಥಳ: ನಿವೃತ್ತ ಪೊಲೀಸ್ ಎಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್‌ ಧರ್ಮಸ್ಥಳ ಗ್ರಾಮದ ಅನೆಕ್ಕಲ ನಿವಾಸಿ ಪರಮೇಶ್ವರ ಪೂಜಾರಿ (72.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.12 ರಂದು ನಿಧನರಾದರು.

ಇವರು ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಶ್ವಾನದಳ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರರವರ ಮುಖ್ಯ ಸಚೇತಕರಾಗಿದ್ದ ಸಂದರ್ಭದಲ್ಲಿ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದರು. ವೃತ್ತಿಯಿಂದ ನಿವೃತ್ತಿಗೊಂಡ ಬಳಿಕ ಇವರು ಧರ್ಮಸ್ಥಳದ ಆನೆಕ್ಕಲದಲ್ಲಿ ವಾಸವಾಗಿದ್ದರು.

ಮೃತರು ಪತ್ನಿ ಲಲಿತಾ,ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!