Friday, December 6, 2024
Homeಕರಾವಳಿಮಂಗಳೂರುಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ...!

ಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ…!

spot_img
- Advertisement -
- Advertisement -

ಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ಭಾನುವಾರ ರಾತ್ರಿ ತಣ್ಣೀರುಬಾವಿ ಕಡಲತೀರದಲ್ಲಿ ಪತ್ತೆಯಾಗಿದೆ. ಕಸಬಾ ಬೆಂಗ್ರೆ ನಿವಾಸಿ ಮುಹಮ್ಮದ್ ಶರೀಫ್ (35) ಮೃತ ವ್ಯಕ್ತಿಯಾಗಿದ್ದಾನೆ. ಸೆಪ್ಟೆಂಬರ್ 11 ರಂದು ನಸುಕಿನ ವೇಳೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರ ಪಾಲಾಗಿತ್ತು. ಈ ಬೋಟ್‌ನಲ್ಲಿದ್ದ ಐವರ ಪೈಕಿ ನಾಲ್ವರನ್ನು ರಕ್ಷಿಸಲಾಗಿತ್ತು.

ಆದರೆ, ಶರೀಫ್ ನಾಪತ್ತೆಯಾಗಿದ್ದು, ಎರಡು ದಿನಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಲಾಗಿತ್ತು ಶನಿವಾರ ಕಡಲು ಪುಕ್ಷುಬ್ಧತೆಯಿಂದ ಕೂಡಿದ್ದರಿಂದ ಇಡೀ ದಿನ ಹುಡುಕಾಟ ನಡೆಸಿದರೂ ಯಾವುದೇ ಪುಯೋಜನವಾಗಿರಲಿಲ್ಲ.

ಮುಳುಗು ತಜ್ಞರ ನಿರಂತರ ಕಾರ್ಯಾಚರಣೆಯಿಂದಾಗಿ ಭಾನುವಾರ ರಾತ್ರಿ ಶರೀಫ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನಗರದ ವೆನ್ಮಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಶರೀಫ್ ಹುಡುಕಾಟಕ್ಕೆ ಸಮುದ್ರಕ್ಕೆ ಧುಮುಕಿದ್ದ ಡಿವೈಎಫ್‌ಐ ಕಾರ್ಯಕರ್ತ ಮಯ್ಯದ್ದಿ ಎಂಬುವವರ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!