Saturday, June 6, 2026
Homeತಾಜಾ ಸುದ್ದಿರಸ್ತೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಅಡ್ಡಗಟ್ಟಿದ ಒಂಟಿ ಸಲಗ!

ರಸ್ತೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಅಡ್ಡಗಟ್ಟಿದ ಒಂಟಿ ಸಲಗ!

- Advertisement -
- Advertisement -

ರಾಮನಗರ: ಒಂಟಿ ಸಲಗವೊಂದು ಕೆಎಸ್ಆರ್ ಟಿಸಿ ಬಸ್ ಅನ್ನು ಅಡ್ಡಗಟ್ಟಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.

ಕನಕಪುರ ತಾಲೂಕಿನ ತೇರು ಬೀದಿ ಗ್ರಾಮದ ಬಳಿ ಬಸ್ ಅನ್ನು ರಸ್ತೆಯಲ್ಲಿ ಕಾಡಾನೆ ಅಡ್ಡಗಟ್ಟಿದೆ.

ಮರಳವಾಡಿ ಗ್ರಾಮದಿಂದ ತೇರುಬೀದಿ ಗ್ರಾಮಕ್ಕೆ ಕೆಎಸ್ ಆರ್ ಟಿಸಿ ಬಸ್ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಒಂಟಿ ಸಲಗ ಅಡ್ಡಗಟ್ಟಿದೆ.

ಈ ವೇಳೆ ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಓಡಿಸುವ ಯತ್ನ ನಡೆಸಿದರೂ ಪಟಾಕಿ ಸದ್ದಿಗೂ ಕಾಡಾನೆ ಹೆದರಲಿಲ್ಲ.

ಕೊನೆಗೆ ಆನೆ ಸ್ಥಳದಿಂದ ಕದಲುವವರೆಗೂ ಕಾಯ್ದು ನಂತರವೇ ತೇರುಬೀದಿ ಗ್ರಾಮದ ಕಡೆ ಕೆಎಸ್ ಆರ್ ಟಿಸಿ ಬಸ್ ತೆರಳಿದೆ.

.

- Advertisement -

Latest News

error: Content is protected !!