Saturday, June 27, 2026
Homeಕರಾವಳಿಮಂಗಳೂರಿನಲ್ಲಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿಯ ರಕ್ಷಣೆ

ಮಂಗಳೂರಿನಲ್ಲಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿಯ ರಕ್ಷಣೆ

- Advertisement -
- Advertisement -

ಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್ ನಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಯುವತಿಯನ್ನು ಕರಾವಳಿ ಕಾವಲು ಪಡೆಯ ಜೀವರಕ್ಷಕ ಅಶೋಕ್‌ ಕುಮಾರ್‌ ಸೋಮೇಶ್ವರ್‌ ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನಿಂದ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದ ಮೂರು ಮಂದಿ ಯುವತಿಯರು ಸಮುದ್ರದಲ್ಲಿ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ, ಒಬ್ಬಾಕೆ ದೊಡ್ಡ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಣೆ ಮಾಡಲಾಗಿದೆ.


ಬೆಂಗಳೂರಿನ ಬೊಮ್ಮಸಂದ್ರದ ನಿವಾಸಿ ಕೀರ್ತಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಿಸಲ್ಪಟ್ಟವಳು. ಕೀರ್ತಿ ತನ್ನ ಸ್ನೇಹಿತೆಯರೊಂದಿಗೆ ಸೋಮೇಶ್ವರ ಕಡಲ ತೀರಕ್ಕೆ ಬಂದಿದ್ದರು. ಎಲ್ಲರು ಸಮುದ್ರದ ದಡದಲ್ಲಿ ಆಟವಾಡುತ್ತಿದ್ದಾಗ ಕೀರ್ತಿ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದುದನ್ನು ಗಮನಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಜೀವರಕ್ಷಕ ಅಶೋಕ್ ಸೋಮೇಶ್ವರ ,ಕಿರಣ್ ಆಂಟನಿ ಮತ್ತು ಶಿವಪ್ರಸಾದ್ ತಕ್ಷಣ ನೀರಿಗೆ ಧುಮುಕಿ ಕೀರ್ತಿಯನ್ನು ರಕ್ಷಿಸಿದ್ದಾರೆ. 

ತೀವ್ರ ಅಸ್ವಸ್ಥಗೊಂಡಿದ್ದ ಕೀರ್ತಿಗೆ ಜೀವರಕ್ಷಕರು ಪ್ರಥಮ ಚಿಕಿತ್ಸೆ ನೀಡಿದ ಕಾರಣ ಕೀರ್ತಿ ಚೇತರಿಸಿಕೊಂಡಿದ್ದು, ತಾವು ಉಳಿದು ಕೊಂಡಿದ್ದ ಸುರತ್ಕಲ್ ನ‌ ಲಾಡ್ಜ್ ಗೆ ಕ್ಯಾಬ್‌ನಲ್ಲಿ ತೆರಳಿದ್ದಾರೆ

- Advertisement -

Latest News

error: Content is protected !!