Saturday, January 16, 2021
Home ತಾಜಾ ಸುದ್ದಿ ಕಾರವಾರ:ವಿದ್ಯುತ್ ಚಾಲಿತ ಸೈಕಲ್‌ಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು- ಚಾರ್ಜ್,ಪೆಡಲ್ ಎರಡರಲ್ಲೂ ಕಾರ್ಯ ನಿರ್ವಹಿಸುವ ಸೈಕಲ್!..

ಕಾರವಾರ:ವಿದ್ಯುತ್ ಚಾಲಿತ ಸೈಕಲ್‌ಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು- ಚಾರ್ಜ್,ಪೆಡಲ್ ಎರಡರಲ್ಲೂ ಕಾರ್ಯ ನಿರ್ವಹಿಸುವ ಸೈಕಲ್!..

- Advertisement -
- Advertisement -

ಕಾರವಾರ: ನಗರದ ಸೇಂಟ್ ಜೋಸೆಫ್ಸ್ ಪಿ.ಯು ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಬ್ಬರು ಲಾಕ್‌ಡೌನ್ ಸಮಯದಲ್ಲಿ ವಿದ್ಯುತ್ ಚಾಲಿತ ಸೈಕಲ್‌ಗಳನ್ನು ಸಿದ್ಧಪಡಿಸಿದ್ದಾರೆ . ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿರುವ ತನ್ವಿ ವಿನಾಯಕ ಚಿಪ್ಕರ್ (ಪಿ.ಸಿ.ಎಂ.ಸಿ ವಿಭಾಗ) ಹಾಗೂ ಕುನಾಲ್ ಜಗದೀಶ ನಾಯ್ಕ (ಪಿ.ಸಿ.ಎಂ.ಬಿ ವಿಭಾಗ) ಈ ಸೈಕಲ್‌ಗಳನ್ನು ಸಿದ್ಧಪಡಿಸಿದ್ದು ಮಾರುಕಟ್ಟೆಗಳಲ್ಲಿ ದೊರೆಯುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗಿಂತ ಭಿನ್ನವಾಗಿದೆ.

ಇವರು ಸಿದ್ಧಪಡಿಸಿದ ಸೈಕಲ್‌ಗಳ ಬ್ಯಾಟರಿಗಳಲ್ಲಿ ಚಾರ್ಜ್ ಖಾಲಿಯಾದರೆ, ಪೆಡಲ್ ತುಳಿದು ಮುಂದೆ ಸಾಗಲು ಸಾಧ್ಯವಾಗುವುದು ವಿಶೇಷವಾಗಿದೆ. ಇದಕ್ಕಾಗಿ ಸೈಕಲ್‌ಗಳಿಗೆ ಎರಡು ಚೈನ್‌ಗಳನ್ನು ಅಳವಡಿಸಿ ಪರಸ್ಪರ ಹೊಂದಾಣಿಕೆ ಆಗುವಂತೆ ಚಾಕಚಕ್ಯತೆಯಿಂದ ಜೋಡಿಸಿ ಅಭಿವೃದ್ಧಿ ಪಡಿಸಲಾಗಿದೆ.

- Advertisement -
- Advertisment -

Latest News

error: Content is protected !!