- Advertisement -
![]()
- Advertisement -
ಚಿಕ್ಕಮಗಳೂರು : ಪೆಟ್ರೋಲ್ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದ ಬಳಿ ನಡೆದಿದೆ.

ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಕಳ್ಳತನದ ಲಾರಿಗೆ ನಂಬರ್ ಪ್ಲೇಟ್ ಕೂಡ ಇಲ್ಲ. ಇನ್ನು ಲಾರಿ ಬಿಟ್ಟು ಪೆಟ್ರೋಲ್ ಕಳ್ಳರು ಪರಾರಿಯಾಗಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನಲ್ಲಿ ಎಲ್ಲೂ ಪೆಟ್ರೋಲ್ ಪೈಪ್ ಲೈನ್ ಕೊರೆದಿಲ್ಲ. ಬೇರೆ ಕಡೆ ಪೈಪ್ ಕೊರೆದು ಪೆಟ್ರೋಲ್ ಕದ್ದು ಸಾಗಿಸುತ್ತಿರೋ ಅನುಮಾನ ವ್ಯಕ್ತವಾಗಿದೆ. ಗೋಣಿಬೀಡು ಪೊಲೀಸರು ಲಾರಿಯನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗಾಗಿ ಗೋಣಿಬೀಡು ಪೊಲೀಸರು ಬಲೆ ಬೀಸಿದ್ದಾರೆ.
- Advertisement -


