Saturday, June 27, 2026
Homeತಾಜಾ ಸುದ್ದಿಕೆಜಿಎಫ್-2 ಟೀಸರ್ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದ ಬೆನ್ನಲ್ಲೇ ಯಶ್ ಗೆ ಶಾಕ್: ಆರೋಗ್ಯ ಇಲಾಖೆಯಿಂದ...

ಕೆಜಿಎಫ್-2 ಟೀಸರ್ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದ ಬೆನ್ನಲ್ಲೇ ಯಶ್ ಗೆ ಶಾಕ್: ಆರೋಗ್ಯ ಇಲಾಖೆಯಿಂದ ರಾಕಿಂಗ್ ಸ್ಟಾರ್ ಗೆ ನೋಟಿಸ್

- Advertisement -
- Advertisement -

ಬೆಂಗಳೂರು: ಕೆಜಿಎಫ್-2 ಟೀಸರ್ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದ ಖುಷಿಯಲ್ಲಿರುವಾಗಲೇ ಆರೋಗ್ಯ ಇಲಾಖೆ ರಾಕಿಂಗ್ ಸ್ಟಾರ್ ಗೆ ಭರ್ಜರಿ ಶಾಕ್ ನೀಡಿಡೆ. ಟೀಸರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೀಸರ್ ಸಂಬಂಧ ಯಶ್ ಗೆ ನೋಟಿಸ್ ನೀಡಿದೆ. 

ಟೀಸರ್ ನಲ್ಲಿ ಯಶ್ ಗನ್ ನಿಂದ ಸಿಗರೇಟ್ ಹಚ್ಚುವ ದೃಶ್ಯವಿದೆ. ಇದಕ್ಕೆ ನಿಯಮದ ಪ್ರಕಾರ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎನ್ನುವ ಕ್ಯಾಪ್ಷನ್ ಹಾಕಬೇಕು. ಆದರೆ ಟೀಸರ್ ನಲ್ಲಿ ಹಾಕಿಲ್ಲ. ಇದು ಧೂಮಪಾನ ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹಾಗಾಗಿ ಈ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ.

ಲಕ್ಷಾಂತರ ಯುವ ಅಭಿಮಾನಿಗಳನ್ನು ಹೊಂದಿರುವ ಮತ್ತು ಸಾಮಾಜಿಕ ಕಳಕಳಿ ಇರುವ ಯಶ್ ಇಂತಹ ದೃಶ್ಯಗಳನ್ನು ಯುವ ಜನತೆ ಅನುಸರಿಸುವುದು ಸಾಮಾನ್ಯ. ಇದರಿಂದ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಯುವ ಜನರು ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!