Saturday, June 6, 2026
Homeಕರಾವಳಿಶಾಸಕ ಎಸ್ ಅಂಗಾರ ಸಚಿವರಾಗೋದು ಬಹುತೇಕ ಖಚಿತ: ಯಾವುದೇ ಖಾತೆ ಕೊಟ್ರು ನಿಭಾಯಿಸ್ತೀನಿ ಅಂದ್ರು ಸುಳ್ಯದ...

ಶಾಸಕ ಎಸ್ ಅಂಗಾರ ಸಚಿವರಾಗೋದು ಬಹುತೇಕ ಖಚಿತ: ಯಾವುದೇ ಖಾತೆ ಕೊಟ್ರು ನಿಭಾಯಿಸ್ತೀನಿ ಅಂದ್ರು ಸುಳ್ಯದ ಅಪ್ಪಟ ಬಂಗಾರ..

- Advertisement -
- Advertisement -

ಬೆಂಗಳೂರು: ಆರು ಬಾರಿ ಗೆದ್ದು ತಮ್ಮ ವ್ಯಕ್ತಿತ್ವದ ಮೂಲಕ ಹೆಸರಾದ ಸುಳ್ಯದ ಶಾಸಕ ಎಸ್ ಅಂಗಾರ ಅವರು ಈ ಬಾರಿ ಶಾಸಕರಾಗೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಗೆಲ್ಲಿಸಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಮುಖ್ಯಮಂತ್ರಿ ಬಿ..ಎಸ್. ಯಡಿಯೂರಪ್ಪ ಅವರೇ ಸ್ವತಃ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ ಎಸ್.ಅಂಗಾರ ತಿಳಿಸಿದ್ದಾರೆ.

ಇಂದು ರಾಜಭವನದಲ್ಲಿ ಮೂರು ಗಂಟೆಗೆ ಸುಳ್ಯ ಕ್ಷೇತ್ರದ ಶಾಸಕ ಎಸ್ ಅಂಗಾರ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.

ತಮಗೆ ಪಕ್ಷದ ವರಿಷ್ಠರು ಮತ್ತು ಯಡಿಯೂರಪ್ಪ ಸೇರಿದಂತೆ ಎಲ್ಲಾ ನಾಯಕರು ಅವಕಾಶ ಮಾಡಿಕೊಟ್ಟಿದ್ದಾರೆ. ತಮಗೆ ಯಾವ ಖೋಟಾದಲ್ಲಿಯೂ ಸಚಿವ ಸ್ಥಾನ ಕೊಟ್ಟಿಲ್ಲ. ಪಕ್ಷ ಸಂಘಟನೆ ನೋಡಿ ಕೊಟ್ಟಿದ್ದಾರೆ. ಯಾವುದೇ ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಇಂತಹದೇ ಸಚಿವ ಸ್ಥಾನ ಬೇಕು ಎಂದು ಕೇಳುವುದಿಲ್ಲ. ತಮ್ಮ ಕ್ಷೇತ್ರದ ಜನ ಮತ್ತು ಯಡಿಯೂರಪ್ಪ ಹಾಗೂ ಸಂಘಟನೆಗೆ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.

- Advertisement -

Latest News

error: Content is protected !!