Wednesday, June 24, 2026
Homeತಾಜಾ ಸುದ್ದಿರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‍ ಜೀವನ ಹಾಳು ಮಾಡಿಕೊಂಡ್ರು; ಬೇಸರ ವ್ಯಕ್ತಪಡಿಸಿದ ರಮ್ಯಾ

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‍ ಜೀವನ ಹಾಳು ಮಾಡಿಕೊಂಡ್ರು; ಬೇಸರ ವ್ಯಕ್ತಪಡಿಸಿದ ರಮ್ಯಾ

- Advertisement -
- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‍ ಬಗ್ಗೆ ರಮ್ಯಾ, ಕಷ್ಟಪಟ್ಟು ಮೇಲೆ ಬಂದಿರುವ ದರ್ಶನ್ ತಮ್ಮ ಜೀವನವನ್ನ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʻದರ್ಶನ್‍ ಲೈಟ್‍ಬಾಯ್‍ನಿಂದ ತಮ್ಮ ವೃತ್ತಿಜೀವನ ಆರಂಭಿಸಿ, ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಆದರೆ, ಜೀವನ ಹಾಳು ಮಾಡಿಕೊಂಡರು. ಈ ಪ್ರಕರಣ ಆಗದೇ ಇದ್ದಿದ್ದರೆ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದಿತ್ತು’ ಎಂದರು.      

ಇನ್ನು ದರ್ಶನ್‍ ಬಂಧನದಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವಾಗುತ್ತದಾ? ಎಂಬ ಪ್ರಶ್ನೆಗೆ, ‘ಸಿನಿಮಾ ಗೆಲ್ಲುವುದಕ್ಕೆ ಸ್ಟಾರ್‍ ನಟರೇ ಬೇಕಿಲ್ಲ. ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ‘ಸು ಫ್ರಂಮ್ ಸೋ’ ಸಾಕ್ಷಿ. ಆ ಚಿತ್ರದಲ್ಲಿ ಯಾವ ಸ್ಟಾರ್ ನಟರು ಇದ್ದಾರೆ? ಕಂಟೆಂಟ್‍ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ’ ಎಂದು ರಮ್ಯಾ ಹೇಳಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!