Wednesday, June 24, 2026
Homeಕರಾವಳಿಉಡುಪಿಉಡುಪಿ; ದ್ವೇಷ ಭಾಷಣ ಆರೋಪ; ಮಹೇಶ ಶೆಟ್ಟಿ ತಿಮರೋಡಿ ಹಾಗೂ ವಸಂತ ಗಿಳಿಯಾರ್‌ ವಿರುದ್ಧ ಪ್ರಕರಣ...

ಉಡುಪಿ; ದ್ವೇಷ ಭಾಷಣ ಆರೋಪ; ಮಹೇಶ ಶೆಟ್ಟಿ ತಿಮರೋಡಿ ಹಾಗೂ ವಸಂತ ಗಿಳಿಯಾರ್‌ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಉಡುಪಿ; ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಅವರ ವಿರುದ್ಧ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 16-08-2025 ರಂಧು ಫೇಸ್ ಬುಕ್‌ ಪೇಜ್‌ ನಲ್ಲಿ  ಮಹೇಶ ಶೆಟ್ಟಿ ತಿಮರೋಡಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್‌ ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇ಼ಷ ಭಾವನೆಯನ್ನು ಉಂಟು ಮಾಡಿದ್ದಾರೆ  ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು  ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಳಾಧ್ಯಕ್ಷರಾದ ರಾಜೀವ ಕುಲಾಲ್ ಅವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ.

ಇನ್ನು ವಸಂತ ಗಿಳಿಯಾರ್‌ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ: 09.08.2025 ರಂದು  ಕೋಟ ವಸಂತ ಗಿಳಿಯಾರ್‌ ಅವರು ಫೇಸ್‌ ಬುಕ್‌ ಖಾತೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಮ್ಯಾಪ್‌ನ್ನು ಆಳವಡಿಸಿ ಅಲ್ಲಿರುವ ದೇವಸ್ಥಾನ ಮತ್ತು ಮಸೀದಿಗಳ ಬಗ್ಗೆ ಒಂದು ಪೋಸ್ಟ್ ಹಾಕಿದ್ದು, ಧರ್ಮ ಧರ್ಮಗಳ ಮಧ್ಯ ,ಜಾತಿಗಳ ಮಧ್ಯ, ಸಮುದಾಯಗಳ ಮಧ್ಯ ಎತ್ತಿಕಟ್ಟಿ ಕೋಮು ಗಲಭೆಯನ್ನು ಸೃಷ್ಠಿಸುವಂತ ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿಗೆ ಪ್ರಚೋದಿಸುವಂತಹ  ಸಂದೇಶವನ್ನು ಫೇಸಬುಕ್‌ ನಲ್ಲಿ ಹರಿಯ ಬಿಟ್ಟಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕೆಂಪು ಮತ್ತು ನೀಲಿ ಬಣ್ಣದಲ್ಲಿ ಗುರುತು ಮಾಡಿದ ನಕ್ಷೆಯನ್ನು ಕೂಡ ಪ್ರಸಾರ ಮಾಡಿರುವ ಎಂದು ಬೆಳ್ತಂಗಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಇದೇ ಪೇಸ್‌ಬುಕ್‌ ಪೋಸ್ಟ್ ಅನ್ನು ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶರತ್ ಶೆಟ್ಟಿ, ವಡ್ಡರ್ಸೆ ಎಂಬುವರು ರೀ ಪೋಸ್ಟ್‌ ಮಾಡಿದ್ದು, ಅವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!