Thursday, June 25, 2026
Homeಕರಾವಳಿಉಡುಪಿಕಾರ್ಕಳ : ಹೊಟೇಲ್ ಉದ್ಯಮಿ ಬೈಲೂರಿನ ಕೃಷ್ಣರಾಜ ಹೆಗ್ಡೆ ಆತ್ಮಹತ್ಯೆಗೆ ಶರಣು

ಕಾರ್ಕಳ : ಹೊಟೇಲ್ ಉದ್ಯಮಿ ಬೈಲೂರಿನ ಕೃಷ್ಣರಾಜ ಹೆಗ್ಡೆ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಾರ್ಕಳ : ಹೊಟೇಲ್ ಉದ್ಯಮಿ ಬೈಲೂರಿನ ಕೃಷ್ಣರಾಜ ಹೆಗ್ಡೆ(45) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಪ್ತರಿಂದ ತಮ್ಮಣ್ಣ ಕರೆಸಿಕೊಳ್ಳುತ್ತಿದ್ದ ಕೃಷ್ಣರಾಜ ಹೆಗ್ಡೆ ಅತ್ರಾಡಿಯ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಮೃತರು ಪತ್ನಿ, ಪುತ್ರ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಕೃಷ್ಣರಾಜ ಹೆಗ್ಡೆ  ಬೈಲೂರು – ಕೌಡೂರು ಮಾರಿಯಮ್ಮದೇವಸ್ಥಾನದ ನಾಯರ್‌ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಕಾರ್ಯದರ್ಶಿಯಾಗಿದ್ದ ಅವರು ಉಡುಪಿ ಮಣಿಪಾಲದಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಿರಿಯಡ್ಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!