Friday, June 5, 2026
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ‌ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ:ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ...

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ‌ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ:ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಕೆಲ ಸಮಯ ಜಪ ಮಾಡಿ ದೇವರ ದರ್ಶನ

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆರ್ಟ್ ಆಫ್ ಲಿವಿಂಗ್ ಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಫೆ.19 ರಂದು ಸಂಜೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಅಗಮಿಸಿದರು.

ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದ ಬಳಿಕ ಸುಮಾರು 25  ನಿಮಿಷ ನದಿಯ ದಡದಲ್ಲಿ ಜಪ ಮಾಡಿದರು. ಅಲ್ಲಿಂದ ನೇತ್ರಾವತಿ ನದಿಗ ವೀಕ್ಷಿಸಿ ನೇರವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಗುರೂಜಿ ಧರ್ಮಸ್ಥಳ ಭೇಟಿ ವೇಳೆ 8 ಜನ ಸಹಾಯಕರು ಆಗಮಿಸಿದ್ದರು.

ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅನ್ನಪೂರ್ಣ ಅನ್ನಛತ್ರಕ್ಕೆ ಭೇಟಿ ನೀಡಿದ ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿ ಫೆ.20 ಸೋಮವಾರ ಬೆಳಿಗ್ಗೆ ಮತ್ತೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೇರವಾಗಿ ಕಾರಿನಲ್ಲಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಬೆಂಗಳೂರು ಆಶ್ರಮಕ್ಕೆ ವಾಪಸ್ ಹೋಗಲಿದ್ದಾರೆ. ಗುರೂಜಿಗೆ  Z+ ಭದ್ರತೆಯನ್ನು ಒದಗಿಸಲಾಗಿತ್ತು.

ಧರ್ಮಸ್ಥಳ ಆಗಮಿಸಿದಾಗ ಹರ್ಷೇಂದ್ರ ಕುಮಾರ್ ಮತ್ತು ಸುರೇಂದ್ರ ಕುಮಾರ್ ಸ್ವಾಗತಿಸಿದರು. ಕೃಷ್ಣ ಸಿಂಗ್, ವೀರು ಶೆಟ್ಟಿ , ಕೆ.ಎನ್.ಜನಾರ್ದನ್ , ಮ್ಯಾನೇಜರ್ ಪಾರ್ಶ್ವನಾಥ್ ಜೈನ್ ಮತ್ತಿತರ ಗುರೂಜಿ ಜೊತೆಯಲ್ಲಿದ್ದರು.

- Advertisement -

Latest News

error: Content is protected !!