Monday, June 8, 2026
Homeಮಹಾನ್ಯೂಸ್ಸೆಲ್ಯೂಟ್ ತಿರಂಗ ಮುಂಬೈ ಕರ್ನಾಟಕ ಘಟಕದ ಅಧ್ಯಕ್ಷರಾಗಿ ರಾಮಣ್ಣ ಬಿ. ದೇವಾಡಿಗ ಆಯ್ಕೆ

ಸೆಲ್ಯೂಟ್ ತಿರಂಗ ಮುಂಬೈ ಕರ್ನಾಟಕ ಘಟಕದ ಅಧ್ಯಕ್ಷರಾಗಿ ರಾಮಣ್ಣ ಬಿ. ದೇವಾಡಿಗ ಆಯ್ಕೆ

- Advertisement -
- Advertisement -

ಮುಂಬೈ: ಸೆಲ್ಯೂಟ್ ತಿರಂಗ ಮುಂಬೈ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಚೆಂಬೂರು ತಿಲಕ್ ನಗರದ ರಾಮಣ್ಣ ಬಿ. ದೇವಾಡಿಗ ಆಯ್ಕೆಯಾಗಿದ್ದಾರೆ.

ಸೆಲ್ಯೂಟ್ ತಿರಂಗದ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಝಾ, ಮಹಾರಾಷ್ಟ್ರ ಅಧ್ಯಕ್ಷ ರಾಜೇಶ್ ರೈ, ಕರ್ನಾಟಕ ಮಹಾರಾಷ್ಟ್ರ ಘಟಕದ ಸಂಚಾಲಕ ಹರೀಶ್ ಪೂಜಾರಿ ಅವರ ಶಿಫಾರಸ್ಸಿನಂತೆ ರಾಮಣ್ಣ ದೇವಾಡಿಗ ಅವರನ್ನು ಆಯ್ಕೆ ಮಾಡಲಾಗಿದೆ.

ಉದ್ಯಮಿಯಾಗಿರುವ ರಾಮಣ್ಣ ದೇವಾಡಿಗ ಅವರು ಅಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಚೆಂಬೂರು ಪೆಸ್ತಮ್ ಸಾಗರ್  ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಪ್ರತಿಷ್ಟಿತ ದೇವಾಡಿಗ ಸಂಘ ಮುಂಬೈ ಇದರ ಚೆಂಬೂರು ವಲಯದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಶ್ರೀ ಧರ್ಮಶಾಸ್ತ್ರ ಭಕ್ತವೃಂದ ಮಂಡಳ(ರಿ) ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

- Advertisement -

Latest News

error: Content is protected !!