Friday, June 5, 2026
Homeತಾಜಾ ಸುದ್ದಿಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ; ಅಗ್ನಿಶಾಮಕ ದಳದಿಂದ ಶೋಧ ಕಾರ್ಯ

ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ; ಅಗ್ನಿಶಾಮಕ ದಳದಿಂದ ಶೋಧ ಕಾರ್ಯ

- Advertisement -
- Advertisement -

ಬೆಳ್ತಂಗಡಿ; ಇಲ್ಲಿನ ನಗರ ಪಂಚಾಯತ್ ಪಂಪ್ ಹೌಸ್ ಬಳಿ ಸೋಮಾವತಿ ನದಿಯಲ್ಲಿ ನಿನ್ನೆ ಸಂಜೆ ಮೀನು ಹಿಡಿಯಲು ಬಂದಿದ್ದ  ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನು ಇವರಿಬ್ಬರು ನೀರು ಪಾಲಾಗಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ  ಅಗ್ನಿ ಶಾಮಕ ದಳ ಹುಡುಕಾಟ ನಡೆಸುತ್ತಿದೆ.

ನಿನ್ನೆಯೇ ಇಬ್ಬರು ಮೀನು ಹಿಡಿಯಲು ಹೊಳೆಗೆ ಬದಿ ಬಂದಿದ್ದರೆಂದು ಹೇಳಲಾಗಿದೆ. ಇಬ್ಬರೂ ಉಜಿರೆ ಕಡೆಯವರೆಂದು ಗೊತ್ತಾಗಿದ್ದು ಅವರು ತಂದಿದ್ದ ಬಲೆ, ಮೊಬೈಲ್ ಫೋನ್ ಮತ್ತು ಪರಿಕರಗಳು ಹೊಳೆಯ ಬದಿ ಪತ್ತೆಯಾಗಿದೆ. ಹಾಗಾಗಿ ನೀರಲ್ಲಿ ಮುಳುಗಿದ್ದಾರೆಂಬ ಅನುಮಾನದ ಹಿನ್ನೆಲೆ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ನಾಪತ್ತೆಯಾದವರಲ್ಲಿ ಒಬ್ಬರು ಉಜಿರೆಯ ರೆಂಜಳ ನಿವಾಸಿ ರಮೇಶ್ ಎಂದು ಹೇಳಲಾಗುತ್ತಿದೆ.ಅಲ್ಲದೇ ದಡದಲ್ಲಿ ಪತ್ತೆಯಾದ ವಸ್ತುಗಳು ಅವರದ್ದೇ ಎಂದು ಅವರ ಸಹೋದರ ಹೇಳಿದ್ದಾರೆ.

- Advertisement -

Latest News

error: Content is protected !!