Thursday, June 4, 2026
Homeಕರಾವಳಿಮೂಡುಬಿದಿರೆ: ಪಾಳು ಬಿದ್ದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

ಮೂಡುಬಿದಿರೆ: ಪಾಳು ಬಿದ್ದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

- Advertisement -
- Advertisement -

ಮೂಡುಬಿದಿರೆ: ಯುವಕನೋರ್ವ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಳಿಯೂರಿನಲ್ಲಿ ನಡೆದಿದೆ.

ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22) ಆತ್ಮಹತ್ಯೆ ಮಾಡಿಕೊಂಡ ಯುವಕ.

ಈತ ಶಿರ್ತಾಡಿ ಪೇಟೆಯ ಮೆಡಿಕಲ್ ನಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಮುಗಿದ ಬಳಿಕ ಸಂಜೆ ನಾಲ್ಕು ಗಂಟೆಗೆ ಮನೆಗೆ ಬಂದಿದ್ದ. ಬಳಿಕ ಮನೆ ಪರಿಸರದಲ್ಲಿ ಸುತ್ತಾಡಿ ಬರುವೆನ್ನೆಂದು ಹೇಳಿ ಹೋಗಿದ್ದ. ರಾತ್ರಿ ವೇಳೆಗೆ ಸಂದೀಪ್ ಮನೆಗೆ ಮನೆಗೆ ಬಾರದಿರುವುದನ್ನು ಕಂಡು, ಮನೆಯವರು ಮನೆ ಸಮೀಪ ಹುಡುಕಾಡಿದಾಗ ಪಾಳು ಬಿದ್ದ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದದೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!