Wednesday, May 8, 2024
Homeತಾಜಾ ಸುದ್ದಿBIG BREAKING: ರಾಗಿಣಿಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್..!

BIG BREAKING: ರಾಗಿಣಿಗೆ 14 ದಿನ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್..!

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಜಡ್ಜ್​ ಆದೇಶ ಹೊರಡಿಸಿದ್ದಾರೆ.

ನಟಿ ರಾಗಿಣಿ ಹಾಗೂ ನಟಿ ಸಂಜನಾ ಅವರ ಸಿಸಿಬಿ ಕಸ್ಟಡಿ ಇಂದು ಅಂತ್ಯವಾದ ಹಿನ್ನಲೆಯಲ್ಲಿ 33ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಪೊಲೀಸರು ಹಾಜರು ಪಡಿಸಿದರು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದಂತ 1ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರು, ಸೆಪ್ಟೆಂಬರ್ 28ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.

ಆದೇಶ ಪ್ರತಿಗಾಗಿ ಕಾಯುತ್ತಿರುವ ಸಿಸಿಬಿ
ಸಿಸಿಬಿ ಪೊಲೀಸರು ನ್ಯಾಯಾಲಯದ ಆದೇಶ ಪ್ರತಿಗಾಗಿ ಕಾಯುತ್ತಿದ್ದು, ಅಧಿಕೃತ ಆದೇಶ ಪ್ರತಿ ಸಿಕ್ಕ ತಕ್ಷಣ ನಟಿ ರಾಗಿಣಿ, ರವಿಶಂಕರ್​, ಲೂಮ್​ ಪೆಪರ್, ರಾಹುಲ್, ನಿಯಾಜ್, ಪ್ರಶಾಂತ್​ನನ್ನು ಜೈ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಿದ್ದಾರೆ.

ನಟಿ ಸಂಜನಾ ಮತ್ತೆರಡು ದಿನ ಸಿಸಿಬಿ ವಶಕ್ಕೆ
ಡ್ರಗ್ಸ್​ ಲಿಂಕ್​ ಪ್ರಕರಣದಲ್ಲಿ ನಟಿ ರಾಗಿಣಿ ಸೇರಿ ಐವರು ಪೆಡ್ಲರ್​​ಗಳು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಆಗಿದ್ದರೆ, ನಟಿ ಸಂಜನಾರನ್ನು ಮತ್ತೆ 2 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ನಟಿ ಸಂಜನಾ ಇದುವರೆಗೂ ವಿಚಾರಣೆಗೆ ಸರಿಯಾಗಿ ಸಹಕರಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಮತ್ತೆ ಕಸ್ಟಡಿಗೆ ಕೇಳಿದ್ದರು. ಅವರ ಮನವಿಯನ್ನು 1ನೇ ಎಸಿಎಂಎಂ ನ್ಯಾಯಾಲಯ ಪುರಸ್ಕರಿಸಿದೆ.

- Advertisement -
spot_img

Latest News

error: Content is protected !!